ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಕಳವು: 6 ಜನರ ಬಂಧನ

ಹೊಸದಿಗಂತ ವರದಿ ಯಲ್ಲಾಪುರ:

ಪಟ್ಟಣದ ಹೊರ ವಲಯದಲ್ಲಿರುವ ಸವಣಗೇರಿಯ ದುರ್ಗಾಂಬಾ ಸೇಲ್ಸ್ ವಕಾರಿಯಿಂದ ಅಡಕೆ ಕದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕುಮಟಾ ತಾಲೂಕಿನ ಮಾಸೂರಿನ ಮಹೇಶ ಈರಾ ಗೌಡ, ಯಲ್ಲಾಪುರದ ಇಸ್ಲಾಂ ಗಲ್ಲಿಯ ಸಫ್ರ್ರಾಜ ಅಬ್ದುಲ್‌ ಸಾಬ ಬಡಗಿ, ಉದ್ಯಮನಗರದ ಪರಶುರಾಮ ಬಾಬು ಕಾಂಬಳೆ, ಕುಮಟಾ ತಾಲೂಕಿನ ಹೊಸೇರಿಯ ಶಶಿಧರ ಲಿಂಗಪ್ಪ ಪಟಗಾರ, ಹರೀಶ ಮಾರಪ್ಪ ಪಟಗಾರ, ನವೀನ ಶ್ರೀಪಾದ ಪಟಗಾರ ಬಂಧಿತರು.

ಕಳೆದ ಮಾ.13 ರಂದು ರಾತ್ರಿ ಸವಣಗೇರಿಯ ದುರ್ಗಾಂಬಾ ಸೇಲ್ ವಕಾರಿಯ ಮೇಲ್ಲಾವಣಿಯನ್ನು ತೆಗೆದು ಒಳನುಗ್ಗಿ 4 ಕ್ವಿಂಟಾಲ್ ಚಾಲಿ ಅಡಕೆ ಹಾಗೂ 80 ಕೆ.ಜಿ ಕೆಂಪು ಅಡಕೆ ಸೇರಿ ಒಟ್ಟು 1.45 ಲಕ್ಷ ರೂ ಮೌಲ್ಯದ ಅಡಕೆ ಕಳವು ಮಾಡಿದ್ದರು. ಈ ಕುರಿತು ವಕಾರಿಯ ಮಾಲೀಕ ಗಣೇಶ ಭಟ್ಟ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಕಳ್ಳತನ ಮಾಡಿದ 4 ಕ್ವಿಂಟಾಲ್ ಅಡಕೆ, ಕೃತ್ಯಕ್ಕೆ ಬಳಸಿದ ಆಟೊರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!