Friday, March 31, 2023

Latest Posts

ಜಾಗತಿಕ ಹಣಕಾಸು ಬಿಕ್ಕಟ್ಟು ಮೀರಿನಿಲ್ಲುವ ಶಕ್ತಿ ಭಾರತಕ್ಕಿದೆ: ಉದಯ್‌ ಕೋಟಕ್‌ ವಿವರಿಸಿದ್ರು ಆಸಕ್ತಿಕರ ಅಂಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದರೂ ಬಾರತವು ಇದನ್ನು ಮೀರಿ ನಿಲ್ಲುವ ಶಕ್ತಿ ಹೊಂದಿದೆ ಎಂದು ಭಾರತದ ಬಿಲಿಯನೇರ್‌ ಉದಯ್‌ ಕೋಟಕ್‌ ಅಭಿಪ್ರಾಯಪಟ್ಟಿದ್ದಾರೆ. ಕೆಲವು ಸ್ಥೂಲ ಅಂಶಗಳು ಭಾರತದ ಪರವಾಗಿ ಕೆಲಸ ಮಾಡಲಿದ್ದು ಈ ಸಂದರ್ಭವನ್ನು ಸರಿಯಾಗಿ ನಿಭಾಯಿಸಿದರೆ ಭಾರತವು ಆ ಹಣಕಾಸು ಬಿಕ್ಕಟ್ಟಿನಲ್ಲಿಯೂ ಮಿನುಗುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ಹಂಚಿಕೊಂಡಿರುವ ಆಸಕ್ತಿಕರ ಅಂಶವೇನೆಂದರೆ ಕೆಲ ಮ್ಯಾಕ್ರೋ ಅಂಶಗಳು ಉತ್ತಮವಾಗಿದೆ. ಪ್ರಸ್ತುತ 2023ನೇ ಆರ್ತಿಕ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯು 2.5 ಶೇಕಡಾಗಿಂತ ಕಡಿಮೆಯಾಗಿದೆ. 2024ರಲ್ಲಿ ಇದು 2 ಶೇಕಡಾಗಿಂತಲೂ ಕಡಿಮೆಯಾಗುವ ನಿರೀಕ್ಷೆಯಿದೆ. ನಮ್ಮ ನೀತಿಗಳನ್ನು ಸರಿಯಾಗಿ ನಿರೂಪಿಸಿದರೆ ಭಾರತವು ಈ ಹಣಕಾಸು ಬಿಕ್ಕಟ್ಟಿನಲ್ಲಿ ಮಿಂಚಬಹುದು ಎಂದಿದ್ದಾರೆ.

ಜಾಗತಿಕ ಬೇಡಿಕೆ ಮಂದಗತಿಯ ನಡುವೆ ಆಮದು ಕಡಿಮೆಯಾಗಿರುವುದರಿಂದ ಫೆಬ್ರವರಿಯಲ್ಲಿ ಭಾರತದ ಸರಕುಗಳ ವ್ಯಾಪಾರ ಕೊರತೆಯು ಕಡಿಮೆಯಾಗಿದ್ದು 13 ತಿಂಗಳ ಕನಿಷ್ಠಕ್ಕೆ ಇಳಿಕೆಯಾಗಿದೆ. ರಫ್ತು ಮತ್ತು ಆಮದುಗಳ ನಡುವಿನ ಅಂತರವು ಫೆಬ್ರವರಿಯಲ್ಲಿ ಸತತ ನಾಲ್ಕನೇ ತಿಂಗಳು ಕುಸಿದಿದ್ದು 17.43 ಶತಕೋಟಿ ಡಾಲರ್‌ ಗೆ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಮದುಗಳು 8.21 ಶೇಕಡಾ ಕುಸಿತ ದಾಖಲಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!