Thursday, June 1, 2023

Latest Posts

ಪ್ರಯಾಣಿಕರೇ ಇಂದು ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ: ಪ್ರಧಾನಿ ರೋಡ್‌ ಶೋ ಭದ್ರತೆಗೆ 2ಸಾವಿರ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡನೇ ದಿನವೂ ಕೂಡ ಕೇಸರಿ ಕಮಾಲ್‌ ನಡೆಯಲಿದ್ದು, ಪ್ರಧಾನಿ ಮೋದಿಯವರು ರೋಡ್‌ ಶೋ ನಡೆಯಲಿದೆ. ಇಂದು ಸಹ ಆರು ಕಿಮೀ ರೋಡ್‌ ಶೋ ಇರುವುದರಿಂದ ಹಲವು ರಸ್ತೆಗಳು ಬಂದ್‌ ಆಗಲಿವೆ. ಈ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರಗ ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಯಾವ್ಯಾವ ಮಾರ್ಗ ಬಂದ್‌

ರೋಡ್ ಶೋ ನಡೆಯುವ ರಸ್ತೆ ಸೇರಿದಂತೆ ಪ್ರಧಾನಿ ಸಂಚರಿಸುವ ರಸ್ತೆಗಳೂ ಕೂಡ ಬಂದ್‌ ಆಗಲಿವೆ. ರಾಜಭವನ ರಸ್ತೆ, ಮೇಖ್ರಿ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಣಮಹರ್ಷಿ ರಸ್ತೆ, ಓಲ್ಡ್ ಏರ್ಪೋರ್ಟ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶ್‌ನಗರ ಕ್ರಾಸ್, ಬಿಇಎಂಎಲ್ ಜಂಕ್ಷನ್, ಜೀವನ್ ಭೀಮಾನಗರ ಮುಖ್ಯ ರಸ್ತೆ, ಇಂದಿರಾನಗರ 80 ಅಡಿ ರಸ್ತೆ, ಇಂದಿರಾನಗರ 12ನೇ ಮುಖ್ಯ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ಸಿಎಂಹೆಚ್ ರಸ್ತೆ, 17ನೇ F ಕ್ರಾಸ್, ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ನಿಲ್ದಾಣ, ಟ್ರಿನಿಟಿ ಜಂಕ್ಷನ್‌ ಸೇರಿದಂತೆ ಹಲವು ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿರುವುದಿಲ್ಲ. ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ರ ವರೆಗೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಭದ್ರತೆಗೆ ಎರಡು ಸಾವಿರ ಪೊಲೀಸ್ ಸಿಬ್ಬಂದಿ‌

ಇಂದಿನ ರೋಡ್‌ಶೋ ಭದ್ರತೆಗೆ ಒಟ್ಟು ಎರಡು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ನಿನ್ನೆ ಎಂಟು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ, ಭದ್ರತಾ ಲೋಪವಾಗದಂತೆ ತಡೆಯಲು ಇಂದು ಕೂಡ ಎರಡು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!