ಪತ್ನಿಯೊಂದಿಗೆ ಜಗಳ: ಕೋಪದಿಂದ ಮಗುವನ್ನು 3ನೇ ಅಂತಸ್ತಿನಿಂದ ಎಸೆದು ಹಾರಿದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಪತಿ ನಂತರ ಅಲ್ಲೇ ಇದ್ದ ತನ್ನ 2 ವರ್ಷದ ಮಗುವನ್ನು ಮನೆಯ 3ನೇ ಅಂತಸ್ತಿನಿಂದ ಎಸೆದು ತಾನು ಅಲ್ಲಿಂದ ಜಿಗಿದಿರುವ ಘಟನೆ ನಡೆದಿದೆ.

ಇಲ್ಲಿನ ಕಲ್ಕಾಜಿಯ ಕೊಳೆಗೇರಿಯ ಮನೆಯ ಮೂರನೇ ಅಂತಸ್ತಿನ ಬಾಲ್ಕನಿಯಲ್ಲಿ ಮಾನ್‍ಸಿಂಗ್ ಕೆಳಗೆ ಜಿಗಿದ ವ್ಯಕ್ತಿ. ಈತ ತನ್ನ ಪತ್ನಿ ಪೂಜಾಳೊಂದಿಗೆ ಕಳೆದ ಕೆಲವು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಪೂಜಾ ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು.

ಕಳೆದ ರಾತ್ರಿ ಪೂಜಾಳನ್ನು ಭೇಟಿಯಾಗಲು ಮಾನ್ ಸಿಂಗ್ ಬಂದಿದ್ದ. ಈ ವೇಳೆ ಮತ್ತೆ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು. ಈ ವೇಳೆ ಮಾನ್ ಸಿಂಗ್ ಕೋಪದಲ್ಲಿ ಅಲ್ಲೇ ಇದ್ದ ತನ್ನ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಕೆಳಗೆ ಎಸೆದು ತಾನು ಅಲ್ಲಿಂದ ಹಾರಿದ್ದಾನೆ.
ಇದರಿಂದ ತಂದೆ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾನ್ ಸಿಂಗ್ ಮದ್ಯದ ಅಮಲಿನಲ್ಲಿದ್ದ ಎಂದು ಪೂಜಾಳ ಅಜ್ಜಿ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾನ್ ಸಿಂಗ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!