Wednesday, February 8, 2023

Latest Posts

ಪಾಕ್ ಕ್ಕಿಂತ ಭಾರತದಲ್ಲಿ ಮುಸ್ಲಿಮರು ತುಂಬಾ ಸುರಕ್ಷಿತ: ಭುಟ್ಟೋ ಗೆ ಚಾಟಿ ಬೀಸಿದ ಮುಸ್ಲಿಂ ಧರ್ಮಗುರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ವಿರುದ್ದ ದೇಶದಲ್ಲಿ ಭಾರೀ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ಭಾರತದ ಮುಸ್ಲಿಮರು ಕೂಡ ಪಾಕ್ ಸಚಿವನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಪಾಕಿಸ್ತಾನದಲ್ಲಿರುವ ಮುಸ್ಲಿಮರಿಗಿಂತ ಭಾರತದಲ್ಲಿರುವ ಮುಸ್ಲಿಮರು ತುಂಬಾ ಸುರಕ್ಷಿತರಾಗಿದ್ದಾರೆ ಎಂದು ಅಜ್ಮಿರ್‌ ದರ್ಗಾ ಧರ್ಮಗುರು ಹಜರತ್‌ ಸೈಯದ್‌ ನಾಸಿರುದ್ದೀನ್‌ ಚಿಸ್ತಿ ಹೇಳುವ ಮೂಲಕ ಭುಟ್ಟೋಗೆ ತಿರುಗೇಟು ನೀಡಿದ್ದಾರೆ.
ನಮ್ಮ ಪ್ರಧಾನಿ ಮತ್ತು ನಮ್ಮ ತಾಯ್ನಾಡಿನ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವರು ಬಳಸುತ್ತಿರುವ ಆಕ್ಷೇಪಾರ್ಹ ಪದವನ್ನು ನಾನು ಬಲವಾಗಿ ಖಂಡಿಸುತ್ತೇನೆ.

ಭಾರತೀಯ ಮುಸ್ಲಿಮರು ಪಾಕಿಸ್ತಾನಿ ಮುಸ್ಲಿಮರಿಗಿಂತ ಹೆಚ್ಚು ಸುರಕ್ಷಿತ ಹಾಗೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಟ್ಟುಕೊಳ್ಳಬೇಕು. ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಾಯಲಿಲ್ಲ. ಆದರೆ ಪಾಕಿಸ್ತಾನದಲ್ಲಿ ಅಮೆರಿಕದ ಪಡೆ ಹತ್ಯೆ ಮಾಡಿದೆ ಎಂಬುದನ್ನು ಬಿಲಾವಲ್ ಭುಟ್ಟೋ ಮರೆತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

ಎಂದಿಗೂ ಶ್ರೇಷ್ಠ ದೇಶ ಭಾರತವನ್ನು ತಮ್ಮ ಅಸ್ಥಿರ ದೇಶದೊಂದಿಗೆ ಹೋಲಿಸಬಾರದು. ಭಾರತದ ಸಂವಿಧಾನವು ಎಲ್ಲರಿಗೂ ಧರ್ಮದ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!