ಚೀನಾಗೆ ಸೆಡ್ಡು ಹೊಡೆಯಲು ಲಡಾಖ್ ಮೂಲಸೌಕರ್ಯಾಭಿವೃದ್ಧಿಗೆ ಒತ್ತು ನೀಡಿದ ಸೇನೆ: ಯಾವೆಲ್ಲಾ ಯೋಜನೆಗಳಿವೆ? ಅವುಗಳ ಪ್ರಾಮುಖ್ಯತೆ ಏನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಲಡಾಖ್‌ ಪ್ರದೇಶದಲ್ಲಿ ಡ್ರ್ಯಾಗನ್‌ ಚೀನಾದೊಂದಿಗಿನ ಭಾರತದ ತಿಕ್ಕಾಟ ಹೊಸ ವಿಷಯವೇನಲ್ಲ. ಈ ಪ್ರದೇಶಗಳಲ್ಲಿ ಚೀನಾ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಈ ಕುರಿತಾಗಿ ಚೀನಾದೊಂದಿಗೆ ಅದಾಗಲೇ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಮಾತುಕತೆ ಮುಗಿದ ಕೆಲಸ ಸಮಯದ ವರೆಗೆ ಸುಮ್ಮನಿರುವ ಚೀನಾ ಮತ್ತೆ ಏನಾದರೂ ಕ್ಯಾತೆ ತೆಗೆಯುತ್ತದೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಚೀನಾಗೆ ಅದರದ್ದೇ ಭಾಷೆಯಲ್ಲಿ ಭಾರತೀಯ ಸೇನೆ ಉತ್ತರಿಸುತ್ತಿದೆ. ಈ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ಪ್ರತಿಯಾಗಿ ಲಡಾಖ್‌ ಮೇಲಿನ ಭಾರತೀಯ ಸೈನ್ಯದ ಹಿಡಿತವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಈ ಪ್ರದೇಶದಲ್ಲಿ ಹಲವು ಮೂಲ ಸೌಕರ್ಯಾಭಿವೃದ್ಧಿ ಯೋಜನೆಗಳಿಗೆ ಸೇನೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಮುಂದುವರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಯಾವೆಲ್ಲಾ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಅವುಗಳ ಪ್ರಾಮುಖ್ಯತೆ ಏನು ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಲಡಾಖ್‌ ನಲ್ಲಿ ಸಾರಿಗೆ ವ್ಯವಸ್ಥೆಗೆ ಒತ್ತು, ರಸ್ತೆಗಳ ನಿರ್ಮಾಣ:

ಲಡಾಖ್‌ ಪ್ರದೇಶದ ಮೇಲೆ ಹೆಚ್ಚಿನ ಹಿಡಿತ ಸಾಧಿಸಬೇಕಾದರೆ ಮುಖ್ಯವಾಗಿ ಬೇಕಿರುವುದು ಸರಾಗವಾದ ಸಾರಿಗೆ ವ್ಯವಸ್ಥೆ. ಕಳೆದ ಎರಡು ವರ್ಷಗಳಿಂದ ಸೇನೆಯ ಉತ್ತರ ಕಮಾಂಡ್‌ ಈ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿ, ನಿರ್ಮಾಣ ಮತ್ತು ವಿಸ್ತರಣೆಯಂತಹ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಹೆಚ್ಚಿನ ಸಾಮರ್ಥ್ಯದ ಅಗೆಯುವ ಯಂತ್ರಗಳು, ಸ್ಪೈಡರ್ ಅಗೆಯುವ ಯಂತ್ರಗಳು ಮತ್ತು ಕಡಿಮೆ ತೂಕದ ಕ್ರಾಲರ್ ರಾಕ್ ಡ್ರಿಲ್‌ಗಳಂತಹ ಹೊಸ ಪೀಳಿಗೆಯ ಯಂತ್ರಗಳನ್ನು ಬಳಸಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಉತ್ತರ ಕಮಾಂಡ್‌ನಲ್ಲಿ ಸುಮಾರು 150 ಕಿಮೀ ಕಾರ್ಯಾಚರಣೆಯ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ. ಪಶ್ಚಿಮ ಲಡಾಖ್ ಮತ್ತು ಝನ್ಸ್ಕರ್ ಕಣಿವೆಗೆ ಮನಾಲಿಯಿಂದ ನೇರವಾಗಿ ಪರ್ಯಾಯ ಸಂಪರ್ಕವನ್ನು ಒದಗಿಸುವ ರಸ್ತೆ ನಿರ್ಮಾಣ ಹಂತದಲ್ಲಿದೆ. 298-ಕಿಮೀ ರಸ್ತೆಯಲ್ಲಿ, 65 ಪ್ರತಿಶತದಷ್ಟು ಕೆಲಸ ಮುಗಿದಿದೆ ಮತ್ತು ಯೋಜನೆಯು 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇದು ಹಿಮಾಚಲ ಪ್ರದೇಶದಿಂದ ಲಡಾಖ್‌ ಗೆ ಎಲ್ಲ ಹವಾಮಾನದಲ್ಲೂ ಸುಸಜ್ಜಿತವಾಗಿರಬಲ್ಲ ರಸ್ತೆ ಸಂಪರ್ಕ ಒದಗಿಸಲಿದೆ.

India China tensions rise as New Delhi rushes to protect border from  Beijing | news.com.au — Australia's leading news site

ಇದಲ್ಲದೇ ದರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ (DS-DBO) ರಸ್ತೆಯಲ್ಲಿನ ಸೇತುವೆಗಳನ್ನು ಹೆಚ್ಚು ಸೌಲಭ್ಯಗಳ ಮೂಲಕ ಮೇಲ್ದರ್ಜೆಗೆ ಏರಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು ಈ ಮಾರ್ಗದಲ್ಲಿ ಬರುವ ಒಟ್ಟೂ 35 ಸೇತುವೆಗಳು ಅಭಿವೃದ್ಧಿಯಾಗಲಿವೆ.

ಇದಲ್ಲದೇ ಎತ್ತರದ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳ ಅಗತ್ಯತೆಗಳನ್ನು ಹೆಚ್ಚಿಸಲು ಮೊದಲಬಾರಿಗೆ ದೇಶೀಯವಾಗಿ ನಿರ್ಮಿತವಾದ ʼಸರ್ವತ್ರʼ ದಂತಹ ಯಾಂತ್ರಿಕ ಸೇತುವೆ ನಿರ್ಮಿಸುವ ಪ್ರಯೋಗಕ್ಕೆ ಚಿಂತಿಸಲಾಗಿದೆ.

ಸರೋವರ ಗಸ್ತಿಗೆ ಹೊಸ ಸೌಲಭ್ಯಗಳ ಸೇರ್ಪಡೆ:

ಪ್ಯಾಂಗೋಂಗ್‌ ತ್ಸೋ ದಂತಹ ವಿಸ್ತಾರ ಸರೋವರಗಳ ಗಸ್ತಿಗೆಂದೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದ್ದು ದೇಶೀವಾಗಿ ನಿರ್ಮಾಣಗೊಂಡ ಹೋವರ್‌ ಕ್ರಾಫ್ಟ್‌ ಯಂತ್ರಗಳನ್ನು ಒದಗಿಸಲಾಗಿದೆ.ಇದು 35 ಸೈನಿಕರು ಅಥವಾ ಒಂದು ಜೀಪ್‌ ಜೊತೆಗೆ 12 ಸೈನಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

VIDEO: Now Indian Army will reach anywhere in Pangong Lake in minutes, see  the special boat found for patrolling – न्यूज़लीड India

ಸೈನಿಕರಿಗೆಂದೇ ಆವಾಸ ಸ್ಥಾನಗಳ ನಿರ್ಮಾಣ:

ಲಡಾಖ್‌ ಪ್ರದೇಶದಲ್ಲಿ ಸೈನಿಕರ ವಸತಿ ಹಾಗು ಯುದ್ಧೋಪಕರಣಗಳ ಶೇಖರಣೆಗೆಂದೇ ವಿಶೇಷ ಆಧುನಿಕ ಸೌಲಭ್ಯಗಳುಳ್ಳ ಆವಾಸ ಸ್ಥಾನಗಳನ್ನು ನಿರ್ಮಿಸಲಾಗಿದೆ. ಟ್ಯಾಂಕ್‌ಗಳು ಮತ್ತು ಫಿರಂಗಿ ಗನ್‌ಗಳು ಸೇರಿದಂತೆ ಸುಮಾರು 450 ಭಾರೀ ವಾಹನಗಳನ್ನು ಕಳೆದ ಎರಡು ವರ್ಷಗಳಲ್ಲಿ ನಿರ್ಮಿಸಲಾಗಿದೆ ಎಂದು ಸೇನೆ ಹೇಳಿದೆ. ಸುರಂಗಗಳು, ಗುಹೆಗಳು ಮತ್ತು ಭೂಗತ ಯುದ್ಧಸಾಮಗ್ರಿ ಮಳಿಗೆಗಳ ನಿರ್ಮಾಣ ಪ್ರಗತಿಯಲ್ಲಿದೆ.

ಇದಲ್ಲದೇ ನ್ಯೋಮಾದಲ್ಲಿ ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ ವತಿಯಿಂದ ಭಾರತದ ಎತ್ತರದ ಪ್ರದೇಶದಲ್ಲಿರು ವಾಯುನೆಲೆಯನ್ನು ಅಭಿವೃದ್ಧಿಪಡಿಸಿ ವಿಸ್ತರಿಸಲಾಗುತ್ತಿದೆ. ಇದು ಸುಸಜ್ಜಿತ ಮೇಲ್ಮೈಯೊಂದಿಗೆ ಸುಧಾರಿತ ಲ್ಯಾಂಡಿಂಗ್ ಮೈದಾನವನ್ನು ಹೊಂದಿದೆ. ಶಸ್ತ್ರಾಸ್ತ್ರಗಳು, ಅಗತ್ಯ ಸಾಮಗ್ರಿಗಳು ಮತ್ತು ಸೈನಿಕರ ವೇಗದ ರವಾನೆಗೆ ಇದು ಸಹಕಾರಿಯಾಗಲಿದೆ.

ಚೀನಾವು ಲಡಾಖ್‌ ನ ಕೆಲ ಭಾಗಗಳನ್ನು ಆಕ್ರಮಿಸಿಕೊಂಡಿದ್ದು ಈ ಪ್ರದೇಶದಲ್ಲಿ ಅದಾಗಲೇ ಚತುಷ್ಪಥ ರಸ್ತೆಗಳನ್ನು ನಿರ್ಮಿಸಿದೆ. ಅಲ್ಲದೇ ಲಡಾಖ್‌ ನಿಂದ ಕೇವಲ ಅರ್ಧಗಂಟೆ ದೂರದಲ್ಲಿ ವಾಯುನೆಲೆ ಸ್ಥಾಪಿಸಿದೆ. ಹಿಮಾಲಯ ಪ್ರದೇಶಗಳಲ್ಲಿ ಅನೆಕಟ್ಟುಗಳನ್ನು ನಿರ್ಮಿಸುವ ಮೂಲಕ ಭಾರತಕ್ಕೆ ನಿರಂತರ ಬೆದರಿಕೆಯೊಡ್ಡುವ ಪ್ರಯತ್ನದಲ್ಲಿದೆ ಡ್ರಾಗನ್‌ ಚೀನಾ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲಡಾಖ್‌ ಪ್ರದೇಶಗಳಲ್ಲಿ ಭಾರತೀಯ ಸೇನೆ ಕೈಗೊಳ್ಳುತ್ತಿರೋ ಅಭಿವೃದ್ಧಿ ಕಾರ್ಯಗಳು ಚೀನಾಗೆ ಸೆಡ್ಡುಹೊಡೆಯಲು ಭಾರತೀಯ ಸೇನೆ ಸಜ್ಜಾಗುತ್ತಿರುವುದಕ್ಕೆ ಉದಾಹರಣೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!