ಕಾರಲ್ಲಿ ಕಂಡಿದ್ದು ‘ಅಭಿನವ್ ವೆಡ್ಸ್ ದೀಪಿಕಾ’ ಬೋರ್ಡ್: ಕೆಳಗಿಳಿದಿದ್ದು ಐಟಿ ಅಧಿಕಾರಿಗಳ ‘ದಿಬ್ಬಣ’!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ನಾಯಕಿ, ಮಾಜಿ ಎಂಎಲ್‌ಸಿ ಎ.ವಿ. ಗಾಯತ್ರಿ ಶಾಂತೇಗೌಡ ಅವರಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿರುವ ಐಟಿ ಅಧಿಕಾರಿಗಳು ದಾಳಿಗೆ ಬಂದ ವಿಧಾನ ಇಂಟ್ರೆಸ್ಟಿಂಗ್ ಆಗಿತ್ತು!

ವಾಹನಕ್ಕೆ ʻಅಭಿನವ್ ವೆಡ್ಸ್ ದೀಪಿಕಾʼ ಎಂದು ಬೋರ್ಡ್ ಅಳವಡಿಸಿ ಮದುವೆ ದಿಬ್ಬಣದ ಸೋಗಿನಲ್ಲಿ ಅಧಿಕಾರಿಗಳು ಬಂದಿದ್ದು, ದಾಳಿಯ ಬಗ್ಗೆ ಯಾವುದೇ ಸುಳಿವು ಸಿಗದಂತೆ ನೋಡಿಕೊಂಡಿದ್ದಾರೆ. ಒಂದಿಷ್ಟು ಸಮಯದ ಬಳಿಕವಷ್ಟೇ ಜನತೆಗೆ ಇದು ಆದಾಯ ಇಲಾಖೆ ಅಧಿಕಾರಿಗಳು ದಾಳಿಗೆ ಬಂದಿರುವುದು ಎಂಬುದು ಗೊತ್ತಾಗಿದೆ.

ದಾಳಿ ಮುಂದುವರಿಸಿರುವ ಅಧಿಕಾರಿಗಳು, ದಾಖಲೆ ಪತ್ರಗಳನ್ನು ಜಾಲಾಡುತ್ತಿದ್ದು, ಇದುವರೆಗೆ ದಾಳಿಯ ಕುರಿತಾದ ಯಾವುದೇ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಪೊಲೀಸ್ ಬಂದೋಬಸ್ತ್ ಸ್ಥಳದಲ್ಲಿದ್ದು, ಯಾವುದೇ ಗಲಾಟೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!