ಜಮ್ಮುವಿನ ಕಥುವಾದಲ್ಲಿ ಸೇನೆ ಕಾರ್ಯಾಚರಣೆ: ಓರ್ವ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಕಾಶ್ಮೀರದ ಕಥುವಾದ ಮಂಡ್ಲಿಯಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರನೊಬ್ಬನ್ನ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಇನ್ನುಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಸೆ.28ರಂದು ಕಥುವಾದ ಮಂಡ್ಲಿಯಲ್ಲಿ ಭಯೋತ್ಪಾದಕರು ಇರುವಿಕೆಯ ಮಾಹಿತಿ ದೊರೆತ ಆಧಾರದ ಮೇಲೆ ಭದ್ರತಾ ಪಡೆಗಳ ಶೋಧಕಾರ್ಯ ಪ್ರಾರಂಭವಾಯಿತು. ಕಥುವಾದಲ್ಲಿ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಭಾನುವಾರ ಭದ್ರತಾ ಪಡೆಯು ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದಾರೆ.

ಈ ಕುರಿತು ಅಧಿಕಾರಿಗಳು ಮಾತನಾಡಿ, ಭಾನುವಾರ ಮಧ್ಯಾಹ್ನ ಬಿಲ್ಲವರ ತಹಸಿಲ್‌ನ ಕಾಗ್-ಮಂಡ್ಲಿಯಲ್ಲಿ ನಡೆದ ಎನ್‌ಕೌಂಟರ್‌ನ ಸ್ಥಳದಿಂದ ಭಯೋತ್ಪಾದಕನ ಮೃದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಮಾತನಾಡಿ, ಇನ್ನುಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಮೂರ್ನಾಲ್ಕು ವಿದೇಶಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಎನ್‌ಕಂಟರ್ ಹಾಗೂ ಶೋಧಕಾರ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ. ಜೊತೆಗೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಈ ಪ್ರದೇಶಕ್ಕೆ ಈಗಾಗಲೇ ಬಿಗಿ ಭದ್ರತೆಯನ್ನು ನೀಡಲಾಗಿದ್ದು, ಇಲ್ಲಿ ಅಡಗಿಕೊಂಡಿರುವ ಮೂರ್ನಾಲ್ಕು ವಿದೇಶಿ ಭಯೋತ್ಪಾದಕರನ್ನು ಸೆರೆಹಿಡಿಯಲು ಈ ಕಾರ್ಯಾಚರಣೆ ನಡೆಯುತ್ತಿದೆ ಎಂದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!