ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಾಚೆಗೆ ನಡೆಯುತ್ತಿರುವ ಡ್ರಗ್ ಅಕ್ರಮ ಸಾಗಣೆ ಜಾಲವನ್ನು ಪಂಜಾಬ್ ಪೊಲೀಸರು ಪತ್ತೆ ಮಾಡಿದ್ದು, 6 ಕೆ.ಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.
ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ (ಎಸ್‌ಎಸ್‌ಒಸಿ) ಈ ದಂಧೆಯನ್ನು ಬಯಲಿಗೆಳೆದಿದ್ದು, ಟ್ರಾನ್ಸ್-ಬಾರ್ಡರ್ ನಾರ್ಕೋಟಿಕ್ ನೆಟ್‌ವರ್ಕ್ ವಿರುದ್ಧದ ಪ್ರಮುಖ ಪ್ರಗತಿಯಲ್ಲಿ, ಎಸ್‌ಎಸ್‌ಒಸಿ ಅಮೃತಸರ ಗಡಿಯಾಚೆಗಿನ ಹೆರಾಯಿನ್ ಕಳ್ಳಸಾಗಣೆ ರಾಕೆಟ್ ನ್ನು ಭೇದಿಸಿದೆ ಮತ್ತು 6 ಕೆಜಿ ಹೆರಾಯಿನ್, 67 ಲೈವ್ ಕಾರ್ಟ್ರಿಡ್ಜ್‌ಗಳು, 2 ಮ್ಯಾಗಜೀನ್‌ಗಳು, 6 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.