ಜಮ್ಮು-ಕಾಶ್ಮೀರದಲ್ಲಿ ಅಂಗಡಿಗಳ ಮೇಲೆ ಸೇನೆ ದಾಳಿ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ ಜಿಲ್ಲೆಯ ಅಂಗಡಿಗಳ ಮೇಲೆ ಭದ್ರತಾ ಪಡೆಗಳು (Indian Army) ದಾಳಿ ನಡೆಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ಐದು ಎಕೆ 47 ರೈಫಲ್‍ಗಳು, ಏಳು ಪಿಸ್ತೂಲ್‍ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‍ಗಳು ಮತ್ತು ಸ್ಫೋಟಕ್ಕೆ ಬಳಸುವ ಅಪಾರ ಪ್ರಮಾಣದ ಮದ್ದುಗುಂಡುಗಳು ಪತ್ತೆಯಾಗಿದೆ. ಇದರ ಹಿಂದಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸೇನೆ ಮಾಹಿತಿ ಕಲೆಹಾಕುತ್ತಿದೆ.

ಗುಪ್ತಚರ ಮಾಹಿತಿ ಮೇರೆಗೆ ಸೇನೆ ಕೆಲವು ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳು ಪತ್ತೆಯಾಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!