Sunday, June 4, 2023

Latest Posts

ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಗುರುವಾರ ರಾತ್ರಿ ಮದ್ದು-­ಗುಂಡು ಮತ್ತು ನಗದು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್‌ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಡ್ರೋನ್‌ನಲ್ಲಿದ್ದ ಎಕೆ 47 ರೈಫ‌ಲ್‌ನ ಐದು ಮ್ಯಾಗಜೀನ್‌ಗಳು, 131 ಸುತ್ತು ಗುಂಡುಗಳು, 2 ಲಕ್ಷ ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏ.12ರ ಮಧ್ಯರಾತ್ರಿ ರಜೌರಿ ಜಿಲ್ಲೆಯ ಬೆರಿ ಪಟ್ಟಣ ಪ್ರದೇಶದ ಎಲ್‌ಒಸಿ ಉದ್ದಕ್ಕೂ ಡ್ರೋನ್‌ಗಳ ಅನುಮಾನಾಸ್ಪದ ಚಲನವಲನ­ಗಳು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಡ್ರೋನ್‌ ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಪ್ರದೇಶದ ಸುತ್ತಮುತ್ತ ಶೋಧಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!