ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಎಕ್ಸ್ ಗರ್ಲ್‌ಫ್ರೆಂಡ್ ಮದುವೆ ನಿಲ್ಲಿಸೋದಕ್ಕೆ ಯುವಕನೊಬ್ಬ ಆಕೆಯ ಜತೆಗಿನ ಅಶ್ಲೀಲ ಫೋಟೊಗಳನ್ನು ವರನ ಕುಟುಂಬಕ್ಕೆ ತೋರಿಸಿ, ಮದುವೆ ಮುರಿದಿದ್ದಾನೆ.
ತಿರುವನಂತಪುರದ ಕಡುಕ್ಕಮೂಡುವಿನ ವೆಲ್ಲನಾಡು ನಿವಾಸಿ ವಿಜಿನ್ ಹಾಗೂ ವಧು ನಾಲ್ಕು ವರ್ಷದಿಂದ ಪ್ರೀತಿಯಲ್ಲಿದ್ದರು. ಮನೆಯವರು ವಧುವಿನ ಮದುವೆಯನ್ನು ಬೇರೆ ಹುಡುಗನ ಜೊತೆ ಫಿಕ್ಸ್ ಮಾಡಿದ್ದರು.
ಸಿಟ್ಟಿಗೆದ್ದ ವಿಜಿನ್ ಆಕೆಯ ಜೊತೆಗಿನ ಅಶ್ಲೀಲ ಫೋಟೊಗಳನ್ನು ವರದ ವಾಟ್ಸಾಪ್‌ಗೆ ಕಳುಹಿಸಿದ್ದಾನೆ. ಆತನ ಮನೆಗೆ ತೆರಳಿ ವರನ ತಂದೆ ತಾಯಿಗೆ ಫೋಟೊಗಳನ್ನು ತೋರಿಸಿ ಮದುವೆ ನಿಲ್ಲಿಸಿದ್ದಾನೆ. ಫೋಟೊ ನೋಡಿದ ಕುಟುಂಬದವರು ತಕ್ಷಣವೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ವಿಜಿನ್ ವಿರುದ್ಧ ವಧುವಿನ ಪೋಷಕರು ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮದುವೆ ನಿಲ್ಲಿಸಲು ಹೀಗೆ ಮಾಡಿದೆ ಎಂದು ವಿಜಿನ್ ಹೇಳಿದ್ದಾನೆ.