ಹಳೆಯ ಮತಪೆಟ್ಟಿಗೆಗಳನ್ನು ಕಳವು ಮಾಡಿದ್ದ ಐವರು ಆರೋಪಿಗಳ ಬಂಧನ

ಹೊಸದಿಗಂತ ವರದಿ ಹಾವೇರಿ:

ರಾಜ್ಯದ ಮೂತು ಕ್ಷೇತ್ರಗಳ ಉಪ ಚುನಾವಣೆ ಹೊತ್ತಲ್ಲಿ ರಾಜ್ಯದ ಗಮನ ಸೆಳೆದಿದ್ದ ಹಳೆಯ ಮತಪೆಟ್ಟಿಗೆಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿ, ಅವರಿಂದ ೧೭ಮತ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಗುತ್ತಲ ರಸ್ತೆಯ ವಿಜಯನಗರ ಬಡಾವಣೆ ನಿವಾಸಿ ಸಂತೋಷ ರಂಗಪ್ಪ ಮಾಳಗಿ, ತಾಲೂಕಿನ ಯತ್ತಿನಹಳ್ಳಿಯ ಗಣೇಶ ರೇಣವ್ವ ಹರಿಜನ, ಕೃಷ್ಣ ಮಲಪ್ಪ ಹರಿಜನ, ಪುರದ ಓಣಿಯ ಮುತ್ತಪ್ಪ ನೀಲಪ್ಪ ದೇವಿಹೊಸೂರು, ಮಕಾನಗಲ್ಲಿಯ ಮಹಮ್ಮದ್‌ಜಾವಿದ ಅಬ್ದುಲ್‌ಸತ್ತರಸಾಬ ಮಕಾನದಾರ ಬಂಧಿತ ಆರೋಪಿಗಳು.

ಇವರಿಂದ ೨೭ ಕಬ್ಬಿಣದ ಹಳೆ ಮತಪೆಟ್ಟಿಗೆಗಳು, ಒಂದು ಆಟೋ ವಶಪಡಿಸಿಕೊಳ್ಳಲಾಗಿದೆ.
ಇವರು ನಗರದ ಎಪಿಎಂಸಿ ಗೋದಾಮಿನಲ್ಲಿ ಇಟ್ಟಿದ್ದ ಖಾಲಿ ಮತ ಪೆಟ್ಟಿಗೆಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ಅಲ್ಲದೆ ಕೆಲ ಮತ ಪೆಟ್ಟಿಗೆಗಳನ್ನು ರಸ್ತೆ ಬದಿ ಒಗೆದು ಹೋಗಿದ್ದರು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿತ್ತು.

ಎಸ್ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಶಹರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಖಾಲಿ ಮತಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ.
ಶಿಗ್ಗಾವಿ-ಸವಣೂರ ಉಪ ಚುಣಾವಣೆ ಬೆನ್ನಲ್ಲೆ ಹಳೆಯ ದುರಸ್ಥಿಯಲ್ಲಿದ್ದ ಕಬ್ಬಿಣದ ಮತಪೆಟ್ಟಿಗೆಗಳು ರಸ್ತೆ ಬದಿ ದೊರೆತಿದ್ದ ಕಾರಣ ಜಿಲ್ಲೆಯಲ್ಲಿ ಪ್ರಕರಣ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.

ಇನ್ನು ನಗರದ ಎ.ಪಿ.ಎಂ.ಸಿ ಉಗ್ರಾಣದಿಂದ ಕಬ್ಬಿಣದ ಮತಪೆಟ್ಟಿಗೆಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಿರಂತರ ತನಿಖೆ ನಡೆಸಿ ಕಳ್ಳತನ ಮಾಡಿರುವ ೫ ಜನರನ್ನು ಬಂಧಿಸಿ ಅವರನ್ನು ವಶಕ್ಕೆ ಪಡೆದು ಕಾನೂನಿನ ಪ್ರಕಾರ ಕ್ರಮಕೈಗೊಂಡಿರುತ್ತಾರೆ. ಪೊಲೀಸ್ ಇಲಾಖೆಯ ಕಾರ್ಯವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ  ವಿಜಯಮಹಾಂತೇಶ  ದಾನಮ್ಮನವರ  ಶ್ಲಾಘಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!