ಸಾಮಾನ್ಯವಾಗಿ ಎಷ್ಟೋ ಜನರಿಗೆ ನಿದ್ದೆ ಒಂದು ಸಮಸ್ಯೆ ಅಲ್ವೇ ಅಲ್ಲ. ಸಂತೆಯಲ್ಲೂ ನಿದ್ದೆ ಮಾಡೋಕೆ ತಯಾರಾಗಿರ್ತಾರೆ.
ಆದರೆ ಎಷ್ಟೊಂದು ಜನರಿಗೆ ಕಿಂಗ್ ಸೈಝ್ ಬೆಡ್, ತಲೆ ಮೇಲೆ ಆಕಾಶದಂಥ ವಾತಾವರಣ ಇರೋ ಸ್ಟಿಕರ್ಸ್, ಲೈಟ್ ಮ್ಯೂಸಿಕ್ ಹಾಕಿದ್ರೂ ರಿಲ್ಯಾಕ್ಸ್ ಆಗಿ ನಿದ್ದೆ ಬರೋದಿಲ್ಲ. ನಿದ್ದೆ ಮಾಡೋಕೆ ಸಮಸ್ಯೆ ಅನಿಸಿದ್ರೆ ಈ ಐದು ಟಿಪ್ಸ್ ಫಾಲೋ ಮಾಡಿ ನೋಡಿ..
- ಮಲಗೋ ಒಂದು ಗಂಟೆ ಅಥವಾ ಎರಡು ಗಂಟೆ ಮುನ್ನ ಸ್ಕ್ರೀನ್ ನೋಡ್ಬೇಡಿ, ಅದು ನಿಮ್ಮ ಮೊಬೈಲ್ ಆಗಿರಲಿ, ಟಿವಿ ಆಗಿರಲಿ ಲ್ಯಾಪ್‌ಟಾಪ್ ಆಗಿರಲಿ. ಮನೆಗೆ ಬಂದ ನಂತರವಾದ್ರೂ ಸ್ಕ್ರೀನ್‌ನಿಂದ ದೂರ ಇರಿ. ಇದು ನಿಮ್ಮ ನಿದ್ದೆ ಹಾಳು ಮಾಡತ್ತೆ.
- ಈ ಅಭ್ಯಾಸ ರೂಢಿ ಮಾಡಿ, ಇದು ನಿಮ್ಮ ಲೈಫ್‌ನ ಬೆಸ್ಟ್ ಡಿಸಿಶನ್ ಅಂತೀರಿ. ಮಲಗುವ ಕೋಣೆಯಲ್ಲಿ ಮೊಬೈಲ್ ಬ್ಯಾನ್ ಮಾಡಿ. ಹೌದು, ಮಲಗೋಕೆ ಹೋದಮೇಲೆ ಫೋನ್‌ನಲ್ಲಿ ರೀಲ್ಸ್, ಗೇಮ್ಸ್ ಅಥವಾ ಸೀರೀಸ್ ನೋಡಿದ್ರೇನೆ ನಿದ್ದೆ ಬರೋದು ಅನ್ಕೋಬೇಡಿ. ಅದು ನಿಮ್ಮ ನಿದ್ದೆ ಕಸಿಯತ್ತದೆ. ಬೆಡ್‌ರೂಮ್ ನೋ ಫೋನ್ ಝೋನ್ ಆಗಿರಲಿ.
- ಈ ಅಭ್ಯಾಸ ತುಂಬಾ ಅಂಡರ್‌ರೇಟೆಡ್. ನೆನಪಿದ್ಯಾ ಕಾಲೇಜ್‌ನಲ್ಲಿ ಓದ್ತಾ ಓದ್ತಾ ಹೇಗೆ ಮಗು ಥರ ಮಲ್ಕೋತಿದ್ರಿ. ಈಗೂ ಅದನ್ನೇ ಮಾಡಿ. ಬುಕ್ ಲವರ್ಸ್ ಆಗದವರಿಗೆ ಇದು ಬೆಸ್ಟ್ ಎರಡು ಪೇಜ್ ಓದುತ್ತಲೇ ನಿದ್ದೆ ಬರುತ್ತದೆ. ಪುಸ್ತಕದ ಮೇಲೆ ಪ್ರೀತಿ ಕೂಡ ಬರುತ್ತದೆ. ಓದ್ತಾ ಓದ್ತಾ ಫ್ಯಾನ್ ಆಗ್ತೀರಿ. ಅರ್ಧ ಗಂಟೆ ಪುಸ್ತಕ ಓದಿ.
- ಇನ್ನೇನು ಮಲಗೋಕೆ ಒಂದು ಗಂಟೆ ಇದೆ ಅನ್ನೋ ಹಾಗೆ ಊಟ ಮಾಡ್ಬೇಡಿ. ಊಟಕ್ಕೂ ನಿದ್ದೆಗೂ ಮೂರರಿಂದ ನಾಲ್ಕು ಗಂಟೆ ಗ್ಯಾಪ್ ಕೊಡಿ. ಸಂಜೆ ಸ್ನ್ಯಾಕ್ಸ್ ತಿನ್ನೋ ಅಭ್ಯಾಸ ಇದ್ರೆ ಅದೇ ಸಮಯಕ್ಕೆ ಆರೋಗ್ಯಕರವಾದ್ದು ಏನಾದ್ರು ತಿಂದು ಊಟ ಮುಗಿಸಿಬಿಡಿ.
- ಮಲಗುವ ಮುನ್ನ ಕಾಲಿಗೆ ಹರಳೆಣ್ಣೆ, ಮಲಗುವ ಎರಡು ಗಂಟೆ ಮುನ್ನ ಗ್ರೀನ್ ಟೀ ಕುಡಿಯಿರಿ. ಇಷ್ಟವಿದ್ರೆ ತಲೆಗೆ ಎಣ್ಣೆ ಹಚ್ಚಿ ಮಾಲಿಷ್ ಮಾಡಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾದ್ದು ಒತ್ತಡದಿಂದ ದೂರ ಇರಿ. ಲೈಫ್‌ನಲ್ಲಿ ಸ್ಟ್ರೆಸ್ ಇದ್ದರೆ ನಿದ್ದೆ ಬರೋಕೆ ಹೇಗೆ ಸಾಧ್ಯ?