ಹುಲಿ ಕೊಂದು ಚರ್ಮ ಮಾರಾಟ ಮಾಡಲು ಯತ್ನಿಸಿದ ನಾಲ್ವರ ಬಂಧನ

ಹೊಸದಿಗಂತ ವರದಿ,ಮೈಸೂರು :

ಹುಲಿಯನ್ನ ಕೊಂದು, ಅದರ ಚರ್ಮ ಮಾರಾಟ ಮಾಡಲು ಯತ್ನಿಸಿದ ನಾಲ್ವರು ಆರೋಪಿಗಳನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದಿಡ್ಡಹಳ್ಳಿ ಹಾಡಿಯ ಹರೀಶ, ರಮೇಶ್, ಮನು ಹಾಗೂ ರಾಜೇಶ್ ಬಂಧಿತರು.
ಇವರುಗಳು ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ತರಳುಬಾಗೆ ತಟ್ಟೆಹಳ್ಳಿ ಭಾಗದಲ್ಲಿ ವಯಸ್ಸಾದ ಹುಲಿ ಕೊಂದು, ಅದರ ಚರ್ಮ, ಉಗುರು ಹಾಗೂ ಪಾದಗಳನ್ನ ಕತ್ತರಿಸಿಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿಯ ಮೇಲೆ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆಯ ಸಂಚಾರಿ ದಳದವರು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!