ಬೆಕ್ಕಿಗೆ ಬಣ್ಣ ಬಳಿದು ಹುಲಿಮರಿ ಎಂದು ಮಾರಾಟಕ್ಕಿಟ್ಟವನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಕ್ಕಿಗೆ ಬಣ್ಣ ಬಳಿದು ಹುಲಿಮರಿ ಎಂದು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪ್ರತಿಭತ್ ಎಂಬಾತ ಬೆಕ್ಕಿನ ಮರಿಗೆ ಥೇಟ್ ಹುಲಿಯ ಮರಿ ರೀತಿ ಬಣ್ಣ ಬಳಿದು ಮಾರಲು ಯತ್ನಿಸಿದ್ದಾನೆ.

ತನ್ನ ಬಳಿ ಹುಲಿ ಮರಿ ಮಾರಾಟಕ್ಕಿದೆ. 25 ಲಕ್ಷ ರೂ. ಕೊಟ್ಟು ಕೊಂಡುಕೊಳ್ಳಿ ಎಂದು ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದ. ಪೊಲೀಸರಿಗೆ ವಿಷಯ ತಿಳಿದ ತಕ್ಷಣ ಚೆನ್ನೈ ಪೊಲೀಸರ ಸಹಕಾರದೊಂದಿಗೆ ಕೇರಳ ಅರಣ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!