Saturday, October 1, 2022

Latest Posts

BIG BREAKING | ಹಿಂದುಗಳ ಪಕ್ಷಕ್ಕೆ ಸಿಕ್ಕ ಮನ್ನಣೆ- ಜ್ಞಾನವ್ಯಾಪಿ ವಿಚಾರಣೆಗೆ ಯೋಗ್ಯ ಎಂದ ನ್ಯಾಯಾಲಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶಿವಲಿಂಗವು ಕಂಡುಬಂದ ಜ್ಞಾನವ್ಯಾಪಿ ಮಸೀದಿಯ ಆವರಣ ಯಾರಿಗೆ ಸೇರಿದ್ದು ಎಂಬ ವಿಚಾರಣೆ ನಡೆಸುವುದಕ್ಕೆ ಪ್ರಕರಣ ಯೋಗ್ಯವಾಗಿರುವುದಾಗಿ ಸೋಮವಾರ ವಾರಾಣಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ.

ಈ ಮೂಲಕ ವಿಷ್ಣು ಶಂಕರ ಜೈನ್ ಅವರ ನೇತೃತ್ವದ ಹಿಂದು ಪಕ್ಷದ ವಕಾಲತ್ತಿಗೆ ಮನ್ನಣೆ ದೊರೆತಿದ್ದು, 1991ರ ಪೂಜಾಸ್ಥಳಗಳ ನಿರ್ಬಂಧ ಕಾಯ್ದೆ ಅನ್ವಯ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಕ್ಕೇ ಆಸ್ಪದವಿಲ್ಲ ಎಂದು ವಾದಿಸಿದ್ದ ಮುಸ್ಲಿಂ ಪಕ್ಷದ ವಾದ ಬಿದ್ದುಹೋಗಿದೆ.

ಸೆಪ್ಟೆಂಬರ್ 22ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಹಿಂದುಗಳ ಪಾಲಿಗೆ ಈ ದಿನ ಶುಭ ಸೋಮವಾರ ಆದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!