ಹೊಸದಿಗಂತ ವರದಿ ತುಮಕೂರು:
ಪೆಟ್ರೋಲ್ ಅಳತೆಯಲ್ಲಿ ಲೋಪವಿದೆ ಎಂದು ತುಮಕೂರು ಸೋಮೇಶ್ವರ ಬಡಾವಣೆಯ ಪೆಟ್ರೋಲ್ ಮಾಲಿಕ ಶಿವದೇವ್ ಅವರನ್ನು ಹೆದರಿಸಿ 5 ಲಕ್ಷ ರೂಗಳಿಗೆ ಬೇಡಿಕೆ ಇಟ್ಟಿದ್ದ ಮೂವರತಂಡವನ್ನು ಹೊಸಬಡಾವಣೆಯ ಪೊಲೀಸರು ಬಂಧಿಸಿದ್ದಾರೆ.
ಫೆಬ್ರುವರಿ 17ರಂದು ಬೆಳಿಗ್ಗೆ 11.30ರ ಸುಮಾರಿನಲ್ಲಿ ಕರ್ನಾಟಕ ಜನಸೈನ್ಯ ಅಧ್ಯಕ್ಷನಾದ ರಕ್ಷಿತ್ ಕುಮಾರ್ ಜಿ.ಎಸ್.ತನ್ನ ಸಹಚರರಾದ ಮಂಜುನಾಥ ಮತ್ತು ಅರುಣ್ ಎಂಬುವವರ ಜೊತೆಯಲ್ಲಿ ಪೆಟ್ರೋಲ್ ಬೆಂಕಿಗೆ ಬಂದು ಬಾಟಲ್ ಒಂದಕ್ಕೆ ಪೆಟ್ರೋಲ್ ಹಾಕಿಸಿ ಕೊಂಡು ಅಳತೆ ಕಡಿಮೆ ಇದೆ ಎಂದು ಗಲಾಟೆಗೆ ಇಟ್ಟುಕೊಂಡು ತಮ್ಮದು ದೊಡ್ಡ ಸಂಘಟನೆ 5ಲಕ್ಷ ರೂಗಳನ್ನು ನೀಡಿದಲ್ಲಿ ಸಂಘಟನೆಯ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಕರೆತಂದು ಪೆಟ್ರೋಲ್ ಬೆಂಕಿಗೆ ಬೆಂಕಿ ಹಚ್ಚುವುದಾಗಿ ಬೆದರಿಸಿದ ಪರಿಣಾಮ ಹೆದರಿ ಮಾಲಿಕರು 50 ಸಾವಿರ ರೂಗಳನ್ನು ನೀಡಿದ್ದಾರೆ.
ಗಲಭೆ ಸಂದರ್ಭದಲ್ಲಿ ಸ್ಥಳಕ್ಕೆ ಬೇಟಿ ನೀಡಿದ್ದ ಪೊಲೀಸರ ಮಿತಿಗೆ ಇವರು ಬೆಲೆ ನೀಡಿಲ್ಲ.ನಂತರ ಪೆಟ್ರೋಲ್ ಬಂಕ್ ಮಾಲಿಕರಾದ ಶಿವರಾಜ್ ಅವರು ನೀಡಿದ ದೂರಿನ ಮೇರೆಗೆ ಮೂವರೂ ದಂಡೆಯಲ್ಲಿರುವ ಪೊಲೀಸರು ಬಂಧಿಸಿದ್ದಾರೆ.