ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದ ರೇಷ್ಮೆ ನೂಲು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಟಿಪ್ಪು ಬಡಾವಣೆಯಲ್ಲಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿದ್ದ ಕಾರ್ಮಿಕ ಸನಾವುಲ್ಲಾ ಖಾನ್ (63) ಮೃತಪಟ್ಟಿದ್ದಾರೆ. ಬಾಯ್ಲರ್‌ಗೆ ಸೌದೆ ಹಾಕುವ ವೇಳೆ ಸ್ಫೋಟಗೊಂಡಿದೆ. ಕಾರ್ಖಾನೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಇದ್ದರು. ಆದರೆ ಬಾಯ್ಲರ್‌ನಿಂದ ದೂರ ಇದ್ದ ಕಾರಣ ಅನಾಹುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.