ಹೈದರಾಬಾದ್‌ನಲ್ಲಿ ಉಗ್ರದಾಳಿಗೆ ಸಂಚು ನಡೆಸಿದ್ದ ಮೂವರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ಉಗ್ರದಾಳಿಗೆ ಸಂಚು ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಐಎಸ್‌ಐ-ಎಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಇವರಿಂದ ನಾಲ್ಕು ಗ್ರೆನೇಡ್, 5 ಲಕ್ಷ ರೂಪಾಯಿ ನಗದು, ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಹೈದರಾಬಾದ್‌ನ ಮುಸಾರಂಗಾಬಾದ್ ನಿವಾಸಿ ಅಬ್ದುಲ್ ಜಾಹೇದ್, ಸೈದಾಬಾದ್ ನಿವಾಸಿ ಸಮೀರುದ್ದೀನ್ ಮತ್ತು ಮೆಹೆದಿಪಟ್ಟಣದ ಹಸನ್ ಫಾರೂಕಿ ಬಂಧಿತರು.

ಉಗ್ರದಾಳಿ ನಡೆಸಲು ಇವರು ಯೋಜನೆ ಹಾಕುತ್ತಿದ್ದರು ಎನ್ನಲಾಗಿದೆ. ಭಾನುವಾರ ತಡರಾತ್ರಿ ದಿಢೀರ್ ದಾಳಿ ನಡೆಸಿ ಉಗ್ರರನ್ನು ಪತ್ತೆಮಾಡಲಾಗಿದೆ. ಸಾರ್ವಜನಿಕ ಸಭೆಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ಎಸೆಯುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!