ಬಾಕ್ಸ್‌ ಆಫೀಸ್‌ ನಲ್ಲಿ ಪೊನ್ನಿಯನ್‌ ಸೆಲ್ವನ್‌ ಅಬ್ಬರ: ಮೂರೇ ದಿನದಲ್ಲಿ 202 ಕೋಟಿ ಗಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್- 1 ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಬ್ಲಾಕ್‌ ಬಸ್ಟ್ರ್‌ ಹಿಟ್‌ ಸಾಲಿಗೆ ಸೇರ್ಪಡೆಯಾಗಿದೆ.
ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ವಿಕ್ರಮ್, ಜಯಂ ರವಿ ಮತ್ತು ತ್ರಿಶಾ ಸೇರಿದಂತೆ ಖ್ಯಾತನಾಮರ ತಾರಾಂಗಣವಿರುವ ಚಿತ್ರವು ಬಿಡುಗಡೆಯಾದ ಮೂರೇ ದಿನದಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 202.87 ಕೋಟಿ ಗಳಿಕೆ ಮಾಡಿದೆ. ಪ್ರಭಾವಶಾಲಿ ಬಾಕ್ಸ್ ಆಫೀಸ್ ಕಲೆಕ್ಷನ್‌ನೊಂದಿಗೆ, ಪೊನ್ನಿಯಿನ್ ಸೆಲ್ವನ್ 1 ಅಜಿತ್‌ರ ವಾಲಿಮೈ ಮತ್ತು ಕಮಲ್ ಹಾಸನ್ ಅವರ ವಿಕ್ರಮ್ ಸೇರಿದಂತೆ ಮೊದಲ ವಾರಾಂತ್ಯದ ಸಂಗ್ರಹಣೆಗಳ ವಿಷಯದಲ್ಲಿ ಈ ವರ್ಷದ ಎಲ್ಲಾ ತಮಿಳು ಚಿತ್ರಗಳನ್ನು ಸೋಲಿಸಿದೆ. ಇದು ರಜನಿಕಾಂತ್ ಅವರ 2.O ಮತ್ತು ಕಬಾಲಿ ಜೊತೆಗೆ ತಮಿಳು ಚಿತ್ರರಂಗದಲ್ಲಿ ಮೈಲಿಗಲ್ಲನ್ನು ಸಾಧಿಸಿದ ಮೂರನೇ ಅತಿ ವೇಗದ ಚಿತ್ರವಾಗಿದೆ.

 

ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಸೋಮವಾರ ಬೆಳಿಗ್ಗೆ ಚಿತ್ರ ವಿಶ್ವದಾದ್ಯಂತ ಗಳಿಕೆ ಮಾಡಿದ ಮೊತ್ತವನ್ನು ಹಂಚಿಕೊಂಡಿದ್ದಾರೆ. “ಪೊನ್ನಿಯನ್‌ ಸೆಲ್ವನ್ ಕೇವಲ 3 ದಿನಗಳಲ್ಲಿ ₹200 ಕೋಟಿ ಕ್ಲಬ್ ಅನ್ನು ಪ್ರವೇಶಿಸಿದೆ. ಮೊದಲ ದಿನ  – ₹78.29 ಕೋಟಿ, ಎರಡನೇ ₹60.16 ಕೋಟಿ, ಮೂರನೇ ದಿನ ₹ 64.42 ಸೇರಿದಂತೆ ಒಟ್ಟು ₹ 202.87 ಕೋಟಿ” ಗಳಿಕೆ ಮಾಡಿದೆ ಎಂದು ಬಾಲಾ ಹೇಳಿದ್ದಾರೆ.
ಪೊನ್ನಿಯಿನ್ ಸೆಲ್ವನ್‌ನ ಹಿಂದಿ ಆವೃತ್ತಿಯು ಸಹ ಉತ್ತಮ ವ್ಯಾಪಾರವನ್ನು ಮಾಡುತ್ತಿದೆ. ಇದು ಈ ವರ್ಷದ ಅತಿ ಹೆಚ್ಚು ಗಳಿಕೆಗಳಲ್ಲಿ ಒಂದಾಗಿದೆ. ಮೊದಲ ದಿನದಲ್ಲಿ 80 ಕೋಟಿ ರೂಪಾಯಿ ಗಳಿಸಿದ ಈ ಚಿತ್ರವು ಬ್ಲಾಕ್‌ಬಸ್ಟರ್ ಓಪನಿಂಗ್ ಹೊಂದಿತ್ತು. ಇದು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ತಮಿಳು ಚಿತ್ರವೊಂದರ ಅತಿ ದೊಡ್ಡ ಓಪನರ್ ಆಯಿತು.
ಕಾದಂಬರಿಕಾರ ಕಲ್ಕಿ ಕೃಷ್ಣಮೂರ್ತಿಯವರ ಕೃತಿಗಳನ್ನು ಆಧರಿಸಿರುವ ಚಿತ್ರವು ಐತಿಹಾಸಿಕ ಚೋಳ ಸಾಮ್ರಾಜ್ಯಗಳಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ಸುತ್ತ ಸುತ್ತುತ್ತದೆ. ಚಿತ್ರದ ಎರಡನೇ ಭಾಗ 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!