ರೆಸಾರ್ಟ್‍ನಲ್ಲಿ ಕಳವು: ಇಬ್ಬರು ಆರೋಪಿಗಳ ಬಂಧನ

ಹೊಸದಿಗಂತ ವರದಿ, ಮಡಿಕೇರಿ:

ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಇವಾಲ್ ಬ್ಯಾಕ್ ರೆಸಾರ್ಟ್’ನಲ್ಲಿ ನಡೆದಿದ್ದ ಕಳುವು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಂಡಿದ್ದಾರೆ.
ಗುಹ್ಯ ಗ್ರಾಮದ ಕೆ.ಎಂ.ಪ್ರದೀಪ್(31) ಹಾಗೂ ಕೆ.ಎಸ್.ಶರತ್(30) ಬಂಧಿತರು.
ಆರೋಪಿಗಳ ಬಳಿಯಿಂದ ಒಂದು ಜಖಂಗೊಂಡ ಐಪ್ಯಾಡ್, ಒಂದು ಡೈಮಂಡ್ ಬ್ರಾಸ್ಲೇಟ್, ಒಂದು ಡೈಮಂಡ್ ರಿಂಗ್, 80 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ ಮೋಟಾರ್ ಬೈಕ್, ವ್ಯಾಗನರ್ ಕಾರು ಸೇರಿದಂತೆ 10 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏ.1ರಂದು ಸಿದ್ದಾಪುರದ ಕರಡಿಗೋಡಿನ ಇವಾಲ್ ಬ್ಯಾಕ್ ರೆಸಾರ್ಟ್‌ಗೆ ಮುಂಬೈನಿಂದ ಬಂದು ವಾಸ್ತವ್ಯ ಹೂಡಿದ್ದ ಬಾಲಕೃಷ್ಣ ಭಂಡಾರಿ ಎಂಬವರು ಕೊಠಡಿಯ ಸೇಫ್ ಲಾಕರ್’ನಲ್ಲಿ ಇರಿಸಿದ್ದ ಚಿನ್ನಾಭರಣ ಮತ್ತು ನಗದು ಕಳುವಾಗಿತ್ತು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕ ಎಂ.ಎ.ಅಯ್ಯಪ್ಪ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್‍ ಅವರ ನೇತೃತೃದಲ್ಲಿ, ಮಡಿಕೇರಿ ನಗರ ವೃತ್ತ ನಿರೀಕ್ಷಕ ವೆಂಕಟೇಶ್, ಡಿಸಿಆರ್‍ಬಿ ಪೊಲೀಸ್ ನಿರೀಕ್ಷಕ ಐ.ಪಿ. ಮೇದಪ್ಪ, ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‍ಐ ಮೋಹನ್ ರಾಜ್ ಪಿ, ಪಿ.ಎಸ್.ಐ ಪ್ರಮೋದ್, ಎಸ್.ಎಸ್.ಐ ತಮ್ಮಯ್ಯ, ಮಡಿಕೇರಿ ನಗರ ವೃತ್ತ ಕಛೇರಿಯ ಸಿಬ್ಬಂದಿಗಳಾದ ಚರ್ಮಣ, ಸಿ.ವಿ, ಕಿರಣ್ ಎ.ವಿ. ಸಿದ್ದಾಪುರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಬೆಳ್ಳಿಯಪ್ಪ ಪಿ, ರತನ್ ಟಿ.ಜೆ, ಲಕ್ಷ್ಮೀಕಾಂತ್, ವಸಂತ್‍ಕುಮಾರ್ ಹೆಚ್.ಕೆ, ಭರತ್, ಹರೀಶ್, ಶಿವಕುಮಾರ್, ಮಲ್ಲಪ್ಪ ಮುಶಿಗೇರಿ, ಮಡಿಕೇರಿ ನಗರ ಪೊಲೀಸ್ ಠಾಣೆಯ ದಿನೇಶ್ ಕೆ.ಕೆ, ನಾಗರಾಜ್ ಕಡಗನ್ನನವರ್, ರುದ್ರಪ್ಪಜಿ, ಡಿಸಿಆರ್‍ಬಿ ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ಸುರೇಶ್, ವಸಂತ್‍ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಎಸ್‍ಪಿ ಮನವಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೆಸಾರ್ಟ್‍ಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ರೆಸಾರ್ಟ್’ನಲ್ಲಿ ಕೆಲಸ ಮಾಡಲು ಸಿಬ್ಬಂದಿಗಳನ್ನು ನೇಮಕ ಮಾಡುವ ಸಮಯದಲ್ಲಿ ಸಿಬ್ಬಂದಿಗಳ ಪೂರ್ವಾಪರ ವಿಚಾರಣೆ ಮಾಡಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಮನವಿ ಮಾಡಿದ್ದಾರೆ.
ರೆಸಾರ್ಟ್ ಮಾಲಕರು ಅತ್ಯುತ್ತಮವಾದ ಸುಸ್ಥಿತಿಯಲ್ಲಿರುವ ಸಿಸಿ ಕ್ಯಾಮಾರವನ್ನು ರೆಸಾರ್ಟ್ ಸುತ್ತಮತ್ತ ಮತ್ತು ಪ್ರತಿಯೊಂದು ಕಾಟೇಜ್‍ಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಅಳವಡಿಸಬೇಕು. ರೆಸಾರ್ಟ್ ಸುತ್ತ ಕಾಂಪೌಂಡು ನಿರ್ಮಿಸಿ ಸೂಕ್ತ ಭದ್ರತೆ (ಸೆಕ್ಯೂರಿಟಿ) ಯನ್ನು ಒದಗಿಸಬೇಕು. ರೆಸಾರ್ಟ್‍ಗೆ ಹೋಗಿ ಬರುವ ಜನರ ಬಗ್ಗೆ ನಿಗಾ ಇಡಬೇಕು. ರೆಸಾರ್ಟ್‌’ಗಳಿಗೆ ಬರುವವರು ತಂಗುವ ಕೊಠಡಿಗಳನ್ನು ಭದ್ರಪಡಿಸಿಕೊಳ್ಳುವ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡುವಂತೆ ರೆಸಾರ್ಟ್ ಮಾಲಕರಲ್ಲಿ ಎಸ್‍ಪಿ ಕೋರಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!