ಲಖನೌ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಹೈದರಾಬಾದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲಖನೌ ಸೂರಪ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್​ ಸನ್​ರೈಸರ್ಸ್​ ತಂಡ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.
ಮೊದಲ ಪಂದ್ಯದಲ್ಲಿ ಸೋತಿರುವ ಹೈದರಾಬಾದ್​ ಸನ್​ರೈಸರ್ಸ್​ ತಂಡ ಲಖನೌ ವಿರುದ್ಧದ ಎರಡನೇ ಪಂದ್ಯದಲ್ಲಿ ಜಯಿಸುವ ಮೂಲಕ ಗೆಲುವಿನ ಹಳಿಗೆ ಬರುವ ಇರಾದೆಯಲ್ಲಿದೆ. ಚೆನ್ನೈ ಸೂಪರ್​ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಗೆದ್ದಿರುವ ಕೆಎಲ್​ ರಾಹುಲ್​ ನೇತೃತ್ವದ ಪಡೆ ಕೇನ್​ ವಿಲಿಯಮ್ಸನ್​ ಪಡೆಯನ್ನು ಹಣಿಯುವ ಹುಮ್ಮಸ್ಸಿನಲ್ಲಿದೆ.

ಲಖನೌ ಸೂಪರ್​ ಜೈಂಟ್ಸ್​: ಕೆಎಲ್ ರಾಹುಲ್ (ನಾಯಕ), ಮನೀಷ್​ ಪಾಂಡೆ, ಕೃನಾಲ್​ ಪಾಂಡ್ಯ, ಕ್ವಿಂಟನ್​ ಡಿ ಕಾಕ್ (ವಿಕೆಟ್ ಕೀಪರ್​​), ಜಾಸನ್​ ಹೋಲ್ಡರ್, ದೀಪಕ್​ ಹೂಡಾ, ಆಯುಷ್​ ಬದೋನಿ, ಇವಿನ್ ಲೂಯಿಸ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್.

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ (ವಿಕೆಟ್​ ಕೀಪರ್​), ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ರೊಮಾರಿಯೊ ಶೆಫರ್ಡ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!