Tuesday, March 28, 2023

Latest Posts

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೂ ಸಂಕಷ್ಟ ಶುರುವಾಗಿದೆ. ಪಕ್ಷಕ್ಕಾಗಿ ವಿದೇಶಿ ಹಣ ಬಳಕೆ ಹಾಗೂ ಅಕ್ರಮ ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ.

ಪಾಕಿಸ್ತಾನ ಮಾಧ್ಯಮಗಳ ಪ್ರಕಾರ ಇಮ್ರಾನ್ ಖಾನ್ ಇಂದು ರಾತ್ರಿ ಅರೆಸ್ಟ್ ಆಗುವ ಸಾಧ್ಯತೆ ಇದೆ. ನಿರೀಕ್ಷಾ ಜಾಮೀನಿಗಾಗಿ ಇಮ್ರಾನ್ ಖಾನ್ ಲಾಹೋರ್ ಕೋರ್ಟ್ ಮೊರೆ ಹೋಗಿದ್ದಾರೆ.

ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್(PTI) ಪಕ್ಷ ವಿದೇಶಗಳಿಂದ ಅಕ್ರಮವಾಗಿ ನಿಧಿ ಸಂಗ್ರಹ ಹಾಗೂ ಬಳಕೆ ಕುರಿತು 2014ರಲ್ಲಿ ಪ್ರಕರಣ ದಾಖಲಾಗಿತ್ತು. ವಿದೇಶಿ ವಿನಿಮಯ ನಿಯಮದಡಿ ಪ್ರಕರಣ ದಾಖಲಾಗಿತ್ತು.ಈ ಕುರಿತು ಎಫ್ಐಎ ಕಾರ್ಪೋರೇಟ್ ಬ್ಯಾಂಕಿಂಗ್ 2021ರಲ್ಲಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿತ್ತು.2018ರಲ್ಲಿ ಈ ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು. ಸತತ ನಾಲ್ಕು ವರ್ಷಗಳ ತನಿಖೆ, 92 ಸುದೀರ್ಘ ವಿಚಾರಣೆ ಬಳಿಕ ಜನವರಿ 2022ಕ್ಕೆ ವರದಿ ನೀಡಿತ್ತು.

ವರದಿಯಲ್ಲಿ ಅಕ್ರಮವಾಗಿ ವಿದೇಶಿ ಹಣ ಸ್ವೀಕರಣೆ, 13 ಬ್ಯಾಂಕ್ ಖಾತೆ ತೋರಿಸಿದ್ದರೆ, ಇನ್ನುಳಿದ 50ಕ್ಕೂ ಹೆಚ್ಚು ಬ್ಯಾಂಕ್ ಖಾತೆಯನ್ನು ಮರೆ ಮಾಚಿ ವ್ಯವಹಾರ ನಡೆಸಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಲಾಹೋರ್ ಕೋರ್ಟ್ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.

ನಿರೀಕ್ಷಾ ಜಾಮೀನು ಕೋರಿದ್ದ ಇಮ್ರಾನ್ ಖಾನ್‌ಗೆ ಖುದ್ದು ಹಾಜರಾಗಲು ಸೂಚನೆ ನೀಡಿದೆ. ಈ ವೇಳೆ ಇಮ್ರಾನ್ ಖಾನ್ ನಿರೀಕ್ಷಾ ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಇಮ್ರಾನ್ ಖಾನ್ ಬಂಧನವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!