ಕೊಡಗಿನ ಗೌರಮ್ಮಕಥಾ ಪ್ರಶಸ್ತಿ ಪ್ರದಾನ- ಪುಸ್ತಕ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ಗೋಕರ್ಣದ ಅಶೋಕೆಯಲ್ಲಿ ಕೊಡಗಿನ ಗೌರಮ್ಮ ಕಥಾಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಭಾನುವಾರ ರಾಮಚಂದ್ರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಅವರ ಉಪಸ್ಥಿತಿಯಲ್ಲಿ ಜರಗಿತು.
ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ವಿಜೇತರಿಗೆ ಶ್ರೀಗಳು ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು.
ಪ್ರಥಮ ಪ್ರಶಸ್ತಿ ವಿಜೇತರಾದ ಲತಾ ಹೆಗಡೆ ಹುಬ್ಬಳ್ಳಿ, ದ್ವಿತೀಯ ಸಂಧ್ಯಾ ಭಟ್ ಅರಂತಾಡಿ ಹಾಗೂ ತೃತೀಯ ಬಹುಮಾನ ಸತ್ಯವತಿ ಕೊಳಚಪ್ಪು ಇವರು ಪ್ರಶಸ್ತಿ ಪತ್ರ, ಫಲಕ ಹಾಗೂ ನಗದು ಬಹುಮಾನಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಸರಗೋಡಿನ ಪ್ರಸಿದ್ಧ ಲೇಖಕಿ ಪ್ರಸನ್ನಾ ವಿ ಚೆಕ್ಕೆಮನೆಯವರ ಹೂಮಳೆಗೆ ಮಿನುಗುವ ಮೇಘಗಳು ಎಂಬ ಕಥಾಸಂಕಲನ ಹಾಗೂ ಇರಬೇಕಿತ್ತು ನೀ ಹತ್ತಿರ ಎಂಬ ಕಾದಂಬರಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿ, ಹರಸಿದರು. ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯ ಅಧ್ಯಕ್ಷೆ ಈಶ್ವರಿ ಬೇರ್ಕಡವು ಉಪಸ್ಥಿತರಿದ್ದರು. ಸಂಚಾಲಕಿ ವಿಜಯಾಸುಬ್ರಹ್ಮಣ್ಯ ಕುಂಬಳೆ ಅವರ ನೇತೃತ್ವದಲ್ಲಿ ಕಥಾಸ್ಪರ್ಧೆಯನ್ನು ನಡೆಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!