ಕಾಶ್ಮಿರದಲ್ಲಿ ಗಡಿ ನುಸುಳುವಾಗ ಬಂಧಿತನಾಗಿದ್ದ ಉಗ್ರ ಹೃದಯಾಘಾತದಿಂದ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎರಡು ವಾರಗಳ ಹಿಂದೆ ಕಾಶ್ಮೀರದ ಗಡಿಯಲ್ಲಿ ಒಳ ನುಸುಳುವಿಕೆ ಯತ್ನ ನಡೆಸುತ್ತಿದ್ದ ವೇಳೆ ಬಂಧಿತನಗಿದ್ದ ಪಾಕಿಸ್ತಾನಿ ಭಯೋತ್ಪಾದಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಲಷ್ಕರ್‌ ಉಗ್ರ ತಬ್ರಕ್ ಹುಸೇನ್ (32) ಕಳೆದ ತಿಂಗಳು ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನಲ್ಲಿ ಎಲ್‌ಒಸಿ ನುಸುಳಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದ. ಈ ವೇಲೆ ಸೇನೆಯ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡಿದ್ದ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಸೇನಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅನೇಕ ವಿಚಾರ ಹಂಚಿಕೊಂಡಿದ್ದ ಆತ, ʼಜಮ್ಮು ಮತ್ತು ಕಾಶ್ಮೀರದಲ್ಲಿ ಫಿದಾಯೀನ್ ಭಯೋತ್ಪಾದಕ ದಾಳಿಯನ್ನು ನಡೆಸಲು ಪಾಕಿಸ್ತಾನದ ಸೇನೆಯು 30,000 ನೀಡಿ ತನ್ನನ್ನು ಕಳುಹಿಸಿತ್ತು ಎಂಬ ಸಂಗತಿ  ಬಹಿರಂಗಪಡಿಸಿದ್ದ.
ತಬ್ರಕ್ ಹುಸೇನ್ 2016 ರಲ್ಲೂ ಗಡಿನುಸುಳುವಿಕೆ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದದ್ದ. ಆಗ ಆತನನ್ನು ಮಾನವೀಯತೆಯ ಆಧಾರದ ಮೇಲೆ ಸ್ವದೇಶಕ್ಕೆ ಕಳುಹಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!