ಚೀನಾದಲ್ಲಿ ಮತ್ತೆ ಕೋವಿಡ್‌ ಹೆಚ್ಚಳ: ಚೆಂಗ್ಡು ಮೆಗಾಸಿಟಿ ಲಾಕ್‌ಡೌನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದ ಪಶ್ಚಿಮದಲ್ಲಿರುವ ಚೆಂಗ್ಡು ಜಿಲ್ಲೆಗಳಲ್ಲಿ ಕೋವಿಡ್‌ ಪ್ರಮಾಣದಲ್ಲಿ ಮತ್ತೆ ಏರಿಕೆಯಾಗುತ್ತಿರುವುದರಿಂದ ಲಾಕ್‌ ಡೌನ್‌ ಅನ್ನು ವಿಸ್ತರಿಸಲಾಗಿದ್ದು ಭಾನುವಾರದಿಂದ ಹೆಚ್ಚಿನ ಪ್ರಮಾಣದ ಸಾಮೂಹಿಕ ಕೋವಿಡ್‌ ಪರೀಕ್ಷೆಗೆ ಆಗ್ರಹಿಸಲಾಗಿದೆ.

ಚೆಂಗ್ಡುವಿನ ಕೇಂದ್ರ ಜಿಂಜಿಯಾಂಗ್ ಜಿಲ್ಲೆಯಲ್ಲಿ ತೀವ್ರ ಲಾಕ್‌ ಡೌನ್‌ ಗಳನ್ನು ವಿಸ್ತರಿಸಲಾಗಿದ್ದು ಇತರ ಜಿಲ್ಲೆಗಳು ಭಾನುವಾರ ಮೂರನೇ ಸುತ್ತಿನ ಕೋವಿಡ್ ಪರೀಕ್ಷೆಗಳನ್ನು ಘೋಷಿಸಿವೆ. ಪರೀಕ್ಷೆ ಮಾಡಿದ ನಂತರ ಜನರು ತಕ್ಷಣ ಮನೆಗೆ ಮರಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಶೂನ್ಯ ಕೋವಿಡ್‌ ಸಾಧಿಸಲು ಚೀನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು ಶಾಂಘೈ ನಂತರ ರಾಷ್ಟ್ರದ ಆರನೇ ಅತಿದೊಡ್ಡ ನಗರವು ಮುಚ್ಚಲ್ಪಟ್ಟಿದೆ.

ಚೀನಾ ಶನಿವಾರ ರಾಷ್ಟ್ರವ್ಯಾಪಿ 1,673 ಸ್ಥಳೀಯ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ, ಇದರಲ್ಲಿ 1,359 ಪ್ರಕರಣಗಳಲ್ಲಿ ರೋಗಲಕ್ಷಗಳೇ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಟಿಬೆಟ್ ಎಲ್ಲಾ ಪ್ರಾಂತ್ಯಗಳಿಗಿಂತ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡಿದ್ದು 556 ಹೊಸ ಸೋಂಕುಗಳು ಪತ್ತೆಯಾಗಿವೆ. ಚೆಂಗ್ಡುವಿನ ನೆಲೆಯಾಗಿರುವ ಸಿಚುವಾನ್ ಪ್ರಾಂತ್ಯವು 186 ಪ್ರಕರಣಗಳನ್ನು ವರದಿ ಮಾಡಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!