ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವೇಷದ ಮಾತುಗಳು, ದ್ವೇಷದ ಬಾಣಗಳು ಕಮಲ ಅಥವಾ ಮಾಲೆಯಂತೆ ನನ್ನ ಕೊರಳಿಗೆ ಬಿದ್ದಿವೆ ಎಂದು ಸಂಸದ ಕೆ.ಸುಧಾಕರ್ ಹೇಳಿದ್ದಾರೆ.
ಚುನಾವಣೆ ನಂತರ ನಗರದಲ್ಲಿ ಮಾತನಾಡಿದ ಅವರು, ಅವರ ಅವಹೇಳನಕಾರಿ ಮಾತುಗಳಿಗೆ ನಾನು ಆಭಾರಿಯಾಗಿದ್ದೇನೆ, ಅಂತಹ ದ್ವೇಷದ ಬಾಣಗಳು ನನಗೆ ಕಮಲದ ಹೂಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿದೆ. ಅವರ ನಡವಳಿಕೆ ಇದೇ ರೀತಿ ಮುಂದುವರೆಯಲಿ ಎಂದು ವ್ಯಂಗ್ಯವಾಡಿದರು.
ಕಳೆದ ರಾತ್ರಿ ಏರ್ಪೋರ್ಟ್ನಲ್ಲಿ ನಮ್ಮ ಸದಸ್ಯರ ಹೈಜಾಕ್‌ಗೆ ಪ್ಲಾನ್ ಮಾಡಿದ್ದರು. ಅಂತಿಮವಾಗಿ ಜಯ ಸಿಕ್ಕಿದೆ. ಜನರು ಬಯಸಿದ್ದು ಆಗಿದೆ ಎಂದು ಹೇಳಿದ್ದಾರೆ.