ಮೊದಲ ಓವರ್ ನಲ್ಲೇ ಹ್ಯಾಟ್ರಿಕ್ ನೋ ಬಾಲ್ ಎಸೆದ ಅರ್ಶದೀಪ್ ಸಿಂಗ್: ನೆಟ್ಟಿಗರಿಂದ ಟ್ರೋಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಅರ್ಶದೀಪ್ ಸಿಂಗ್ ಹ್ಯಾಟ್ರಿಕ್ ನೋ ಬಾಲ್ ಎಸೆದಿದ್ದಾರೆ.
ಈ ಮೂಲಕ ನೋ ಬಾಲ್‌ನಲ್ಲೂ ಹ್ಯಾಟ್ರಿಕ್ ಸಾಧನೆ ಎಂದು ನೆಟ್ಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ.

ಅರ್ಶದೀಪ್ ಸಿಂಗ್ ತಮ್ಮ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ನೋ ಬಾಲ್ ಸೇರಿ ಒಟ್ಟು 19 ರನ್ ನೀಡಿದ್ದಾರೆ. ಈ ಮೂಲಕ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.

 

ಲಂಕಾ ವಿರುದ್ದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ ಅರ್ಶದೀಪ್ ಸಿಂಗ್, ನಿರೀಕ್ಷಿತ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

 

ಅರ್ಶದೀಪ್ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಟ್ರೊಲ್ ಗಳು ಮಾಡಲಾಗುತ್ತಿದ್ದು, ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ನೋ ಬಾಲ್ ಎಸೆಯುತ್ತಾರೆ ಎಂದು ಟ್ರೋಲ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!