ಬೀದರ್ ಕೀರ್ತಿ ವಿಶ್ವಮಾನ್ಯವಾಗಲು ಬಿದ್ರಿ ಕಲೆ ಕಾರಣ: ಶಾ ರಶಿದ್ ಮಹಮ್ಮದ್ ಖಾದ್ರಿ

ಹೊಸದಿಗಂತ ವರದಿ ಬೀದರ್‌ :

ಬೀದರ್ ಜಿಲ್ಲೆಯ ಕೀರ್ತಿ 2011 ಹಾಗೂ 2023ರಲ್ಲಿ ಎರಡು ಬಾರಿ ವಿಶ್ವಮಾನ್ಯವಾಗಲು 14ನೇ ಶತಮಾನದಿಂದ ಪ್ರಚಲಿತದಲ್ಲಿರುವ ಬಿದ್ರಿ ಕಲೆ ಮುಖ್ಯ ಕಾರಣವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಶಾ ರಶಿದ್ ಮಹಮ್ಮದ್ ಖಾದ್ರಿ ತಿಳಿಸಿದರು.

ನಗರದ ಹಳೆ ಸೀಟಿಯಲ್ಲಿರುವ ಗೋಲೆಖಾನಾ ಬಳಿಯ ಅವರ ನಿವಾಸದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನ ಪ್ರಶಸ್ತಿ ಅಲ್ಲ ಇಡೀ ಬೀದರ್ ಜಿಲ್ಲೆಯ ಜನತೆಗೆ ಸಂದ ಪ್ರಶಸ್ತಿಯಾಗಿದೆ ಎಂದು ಪುನರೂಚ್ಛರಿಸಿದರು. ಅವರು ತನ್ನ ಈ ಸಾಧನೆಯ ಹಿಂದೆ ಜಿಲ್ಲೆಯ ಎಲ್ಲ ಪತ್ರಕರ್ತರ ಬರವಣಿಗೆ ಅಡಗಿದೆ ಎಂದು ಖಾದ್ರಿ ಸಂತಸ ವ್ಯಕ್ತಪಡಿಸಿದರು.

ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಪೃಥ್ವಿರಾಜ್ ಎಸ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗೋಪಿಚಂದ ತಾಂಬುಳೆ, ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!