50 ವಿದ್ಯಾರ್ಥಿಗಳ ತಲೆಕೂದಲು ಕತ್ತರಿಸಿದ ಶಿಕ್ಷಕ: ಪೋಷಕರು ಕೆಂಡಾಮಂಡಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ತಲೆ ಕೂದಲು ಕತ್ತರಿಸಿದ್ದಾರೆ. ತಮ್ಮ ಅನುಮತಿ ಪಡೆಯದೆ ಮಕ್ಕಳ ಕೂದಲು ಕತ್ತರಿಸಿದ್ದಕ್ಕೆ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ತಲೆಯ ಮೇಲೆ ಉದ್ದ ಕೂದಲು ಬೆಳೆಯಬಾರದು ಎಂಬ ನಿಯಮವಿರುವುದರಿಂದ ಟೀಚರ್ ಈ ರೀತಿ ಮಾಡಿದ್ದಾರಂತೆ. ಸೇಂಟ್ ಮೀರಾ ಶಾಲೆಯ ಹಲವು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತಮ್ಮ ಬಳಿಗೆ ಬಂದು ದೂರು ನೀಡಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು. ಶಿಕ್ಷಕರು ಸುಮಾರು 50-60 ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಅದಕ್ಕೆ ಅವರ ಅನುಮತಿಯನ್ನೂ ತೆಗೆದುಕೊಂಡಿಲ್ಲ. ವಿದ್ಯಾರ್ಥಿಗಳ ಪೋಷಕರಿಂದ ಲಿಖಿತ ದೂರು ಸ್ವೀಕರಿಸಿದ್ದೇವೆ ಎಂದು ಹೇಳಿದರು. ಒಬ್ಬ ವ್ಯಕ್ತಿ ತನ್ನ ಮಗನಿಗೆ ಜ್ವರವಿದ್ದರೂ ಲೆಕ್ಕಿಸದೆ ದಿನವಿಡೀ ನಿಲ್ಲಿಸಿ ಕೂದಲು ಕತ್ತರಿಸಿದ್ದಾರೆ.  ಬೇಡವೆಂದು ಕಣ್ಣೀರಿಟ್ಟರೂ ಶಿಕ್ಷಕರು ಒಪ್ಪಲಿಲ್ಲ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಲಾ ನಿರ್ದೇಶಕ ಅಕ್ಷಿ ಪ್ರಕಾಶ್, ಶಾಲೆಯಲ್ಲಿನ ನಿಯಮಗಳನ್ನು ಪಾಲಿಸುವ ಮೂಲಕ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿರುವಂತೆ ನೋಡಿಕೊಳ್ಳುತ್ತೇವೆ. ಈಗ ಪಾಲಕರು ತಮ್ಮ ಶಾಲೆಗೆ ಅಗೌರವ ತಂದುಕೊಡಬೇಕೆಂದು ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!