Wednesday, June 7, 2023

Latest Posts

ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಕಲಾತಂಡಗಳ ಮೆರೆಗು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ದಿನದ ರೋಡ್‌ ಶೋಗೆ ಕ್ಷಣಗಣನೆ ಶುರುವಾಗಿದೆ. ಇಂದು ಕೂಡ ಬೆಂಗಳೂರಿನಲ್ಲಿ ಕೇಸರಿನ ಕಮಾಲ್‌ ನಡೆಯಲಿದ್ದು, ರೋಡ್‌ ಶೋಗೆ ಮತ್ತಷ್ಟು ಮೆರುಗು ನೀಡಲು ಕಲಾತಂಡಗಳು ಸಜ್ಜಾಗಿವೆ.

ರೋಡ್‌ ಶೋ ಉದ್ದಕ್ಕೂ ಹಲವು ಕಲಾತಂಡಗಳು ಭಾಗಿಯಾಗಿದ್ದು ಚಂಡೆ ವಾದ್ಯ, ಕಂಸಾಳೆ, ಭಜರಂಗಿ ವೇಷಧಾರಿ ನೃತ್ಯ, ವೀರಗಾಸೆ, ಡೊಳ್ಳು ಕುಣಿತ, ಡಂಬಲ್ಸ್‌, ಜಾನಪದ ನೃತ್ಯಗಳು ಗಮನ ಸೆಳೆಯುತ್ತಿವೆ. ಮೋದಿ ನೋಡಲು ಮಳೆಯ ನಡುವೆಯೇ ಪುಟಾಣಿ ಮಕ್ಕಳು ಕಾದು ನಿಂತಿದ್ದಾರೆ

ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಪ್ರತಿಮೆ ಬಳಿಯಿಂದ ರೋಡ್​ಶೋ ಆರಂಭಿಸಲಿದ್ದಾರೆ. ಬಳಿಕ ನ್ಯೂತಿಪ್ಪಸಂದ್ರ ರಸ್ತೆಯಿಂದ ಆರಂಭವಾಗುವ ಮೋದಿ ರೋಡ್​ಶೋ. ಬೆಳಗ್ಗೆ 10.15ಕ್ಕೆ ಹೆಚ್ಎಎಲ್ 2ನೇ ಹಂತ 80 ಅಡಿ ರಸ್ತೆ ಜಂಕ್ಷನ್, ಹೆಚ್ಎಎಲ್ 2ನೇ ಹಂತ, 12ನೇ ಮುಖ್ಯರಸ್ತೆ ಜಂಕ್ಷನ್,  ಫೀಟ್ ರೋಡ್ ಜಂಕ್ಷನ್ ತಲುಪಲಿದೆ. 11.30ಕ್ಕೆ ಟ್ರಿನಿಟಿ ಸರ್ಕಲ್​ಗೆ ತಲುಪಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!