ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ಕ್ಷಣಗಳಲ್ಲಿ ಮೋದಿ ರೋಡ್ ಶೋ ಶುರುವಾಗಲಿದೆ. ರಾಜಭವನದಿಂದ ರಸ್ತೆ ಮಾರ್ಗವಾಗಿ ಪ್ರಧಾನಿ ಮೋದಿ ತಿಪ್ಪಸಂದ್ರದತ್ತ ಬರುತ್ತಿದ್ದಾರೆ. ಹೆಲಿಕಾಪ್ಟರ್ ಮೂಲಕ ಬರಬೇಕಿದ್ದ ಮೋದಿ ಹವಾಮಾನ ವೈಪರೀತ್ಯದಿಂದ ಕಾರಿನಲ್ಲಿ ರಸ್ತೆ ಮೂಲಕವೇ ಬರುತ್ತಿದ್ದಾರೆ.
ನ್ಯೂ ತಿಪ್ಪಸಂದ್ರದ ಬಳಿ ಕೆಂಪೇಗೌಡ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ರೋಡ್ ಶೋ ರಥವೇರಿ ಟ್ರಿನಿಟಿ ಸರ್ಕಲ್ ವರೆಗೂ ರೋಡ್ ಶೋ ಸಾಗಲಿದೆ. ಮೋದಿಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಜನಜಾತ್ರೆ ನೆರೆದಿದೆ.
ರಸ್ತೆಯುದ್ದಕ್ಕೂ ಮೋದಿ ಮೋದಿ ಎಂಬ ಜಯಘೋಷಣೆ ಮೊಳಗುತ್ತಿವೆ. ಮುಸ್ಲಿ ಮಹಿಳೆಯರೂ ಸಹ ಭಜರಂಗಿ ಫೋಟೋ ಹಿಡಿದು ಮೋದಿಗಾಗಿ ಕಾದು ಕುಳಿತಿದ್ದಾರೆ.