ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರದ ಕೆತ್ತನೆಯು ಅತ್ಯಂತ ಹಳೆಯ ಕಲಾ ಪ್ರಕಾರಗಳಲ್ಲಿ ಒಂದಾಗಿದೆ. ಭಾರತದಲ್ಲಿಯೂ ಅನೇಕ ಕಲಾವಿದರು ಅರಮನೆಗಳು ಮತ್ತು ಮರದ ಮೇಲೆ ಪ್ರತಿಮೆಗಳಿಗೆ ರೂಪ ನೀಡಿದ್ದಾರೆ. ಇತ್ತೀಚೆಗೆ ಒಬ್ಬ ಕಲಾವಿದ ಮರದ ಮೇಲೆ ಗ್ರಾಮೀಣ ಬದುಕನ್ನು ಕೆತ್ತಿರುವ ಕಲಾ ಪ್ರಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ವಿಟ್ಟರ್ ಬಳಕೆದಾರರೊಬ್ಬರು ಮರದ ಕಲಾಕೃತಿಯನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ‘ಅದ್ಭುತ ಕಲೆ’ ಎಂಬ ಶೀರ್ಷಿಕೆಯಡಿ ಅವರು ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಕಲಾಕೃತಿಯು ಗ್ರಾಮೀಣ ಜೀವನ ಹೇಗಿರುತ್ತದೆ ಎಂಬುದರ ನೋಟವನ್ನು ನೀಡುತ್ತದೆ. ಈ ವಿಡಿಯೋದಲ್ಲಿರುವ ಕಲಾವಿದನ ವಿವರ ಯಾರಿಗೂ ತಿಳಿದಿಲ್ಲ ಆದರೆ ವೀಕ್ಷಕರು ಕಲಾವಿದನ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ.
‘ನಾನು ಇಲ್ಲಿಯವರೆಗೆ ನೋಡಿದ ಅತ್ಯುತ್ತಮ ವಿಷಯಗಳಲ್ಲಿ ಒಂದಾಗಿದೆ.. ಇದನ್ನು ಮಾಡುವುದು ತುಂಬಾ ಕಷ್ಟ’ ಎಂದು ಕಮೆಂಟ್ ಬರುತ್ತಿವೆ. ಸಾಮಾಜಿಕ ಜಾಲತಾಣಗಳಿಂದಾಗಿ ಅನೇಕ ಅದ್ಭುತ ಕಲೆಗಳು ಮತ್ತು ಕಲಾವಿದರು ಜಗತ್ತಿಗೆ ಪರಿಚಯವಾಗುತ್ತಿದ್ದಾರೆ.