ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ವಾಘ್ಮಯಿ ಅವರು ವಿವೇಕ್ ಎಂಬವರ ಜೊತೆ ಹಸೆಮಣೆ ಏರಿದ್ದು, ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯದಂತೆ ಬೆಂಗಳೂರಿನ ಪ್ರತಿಷ್ಠಿತ ಸ್ಥಳವೊಂದರಲ್ಲಿ ವಿವಾಹವಾಗಿದ್ದಾರೆ.
ಪ್ರತೀಕ್ ಜೊತೆ ವಾಘ್ಮಯಿ ಅವರು ಹಸೆಮಣೆ ಏರಿದ್ದು, ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನೆರವೇರಿದೆ.
ಬಹಳ ಸಮಯದಿಂದಲೂ ಉಡುಪಿ ಮಠದ ಭಕ್ತರಾದ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮಗಳ ವಿವಾಹವನ್ನು ಉಡುಪಿ ಮಠದ ಸಂಪ್ರದಾಯದಂತೆ ನೆರವೇರಿಸಬೇಕಾಗಿ ಇಚ್ಛಿಸಿದ್ದರು. ಅಂತೆಯೇ ಮದುವೆ ನೆರವೇರಿದ್ದು, ಮಠದ ಶ್ರೀಗಳು ಆಶೀರ್ವದಿಸಿದ್ದಾರೆ.