Thursday, December 8, 2022

Latest Posts

ಖ್ಯಾತ ನಟ ಅರುಣ್​ ಬಾಲಿ ವಿಧಿವಶ: ಕಂಬನಿ ಮಿಡಿದ ಚಿತ್ರರಂಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಲಿವುಡ್‌ನ ಚಿತ್ರರಂಗದಲ್ಲಿ ತಮ್ಮ ಪ್ರಭಾವಿ ಅಭಿನಯದ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಛಾಪೊತ್ತಿದ್ದ ಹಿರಿಯ ನಟ ಅರುಣ್ ಬಾಲಿ ಶುಕ್ರವಾರ ವಿಧಿವಶರಾಗಿದ್ದಾರೆ. ಅವರು ಮುಂಬೈನಲ್ಲಿ ತಮ್ಮ 79 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅರುಣ್ ಬಾಲಿ ಕೊನೆಯದಾಗಿ ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಅವರ ನಿಧನಕ್ಕೆ ಚಿತ್ರರಂಗದ ಹಲವಾರು ಮಂದಿ ಕಂಬನಿ ಮಿಡಿಯುತ್ತಿದ್ದಾರೆ.
ಅವರು ಅಪರೂಪದ ನರಸ್ನಾಯುಕ ಕಾಯಿಲೆಯಾದ ಮೈಸ್ತೇನಿಯಾ ಗ್ರ್ಯಾವಿಸ್‌ನಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ನಟನನ್ನು ಮುಂಬೈನ ಹಿರ್ನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅರುಣ್‌ ಬಾಲಿ 1989ರಲ್ಲಿ ಶಾರುಖ್​ ಖಾನ್​ ನಟಿಸಿದ್ದ ʼದೂರ್ಸಾ ಕೇವಲ್​’ ಧಾರಾವಾಹಿಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದರು. ಬಳಿಕ ʼ3 ಈಡಿಯಟ್ಸ್ʼ, ʼಕೇದಾರನಾಥ್ʼ, ʼಪಾಣಿಪತ್ʼ, ʼಹೇ ರಾಮ್ʼ, ʼದಂಡ್ ನಾಯಕ್ʼ, ʼರೆಡಿʼ, ʼಜಮೀನ್ʼ, ʼಪೋಲೀಸ್ ವಾಲಾ ಗೂಂಡಾʼ, ʼಫೂಲ್ ಔರ್ ಅಂಗಾರ್ʼ, ಮತ್ತು ʼರಾಮ್ ಜೇನ್ʼ ಸೇರಿದಂತೆ ಅನೇಕ ಇತರ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕಿರುತೆರೆ ಮತ್ತು ದೂರದರ್ಶನ ಸರಣಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು 1991 ರ ಅವಧಿಯ ನಾಟಕ ಚಾಣಕ್ಯದಲ್ಲಿ ರಾಜ ಪೋರಸ್ ನ ಪಾತ್ರವನ್ನು, ದೂರದರ್ಶನದ ʼಸೋಪ್ ಒಪೆರಾ ಸ್ವಾಭಿಮಾನ್‌ʼನಲ್ಲಿ  ಕುನ್ವರ್ ಸಿಂಗ್ ಮತ್ತು ವಿವಾದಾತ್ಮಕ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 2000 ರ ಚಲನಚಿತ್ರ ಹೇ ರಾಮ್‌ನಲ್ಲಿ ಅವಿಭಜಿತ ಬಂಗಾಳದ ಮುಖ್ಯಮಂತ್ರಿ ಹುಸೇನ್ ಶಹೀದ್ ಸುಹ್ರವರ್ದಿ ಅವರ ಪಾತ್ರವನ್ನು ನಿರ್ವಹಿಸಿದ್ದರು. ಅರುಣ್ ಬಾಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕರೂ ಹೌದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!