Thursday, December 8, 2022

Latest Posts

ಲೋಕಲ್‌ ಟ್ರೈನ್‌ನಲ್ಲಿ ಮಹಿಳೆಯರ ಫೈಟಿಂಗ್‌: ಸೀಟಿಗಾಗಿ ಜುಟ್ಟು ಹಿಡಿದು ಹೊಡೆದಾಡಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನ ಥಾಣೆ-ಪನ್ವೇಲ್ ಲೋಕಲ್ ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಪ್ರಯಾಣಿಕರ ನಡುವೆ ಮಾರಾಮಾರಿ ನಡೆದಿದೆ. ಇಬ್ಬರು ಮಹಿಳೆಯರು ಕೂದಲು ಹಿಡಿದು ಆಸನಕ್ಕಾಗಿ ಹೊಡೆದಾಡಿದ್ದು, ರೈಲಿನಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜಗಳ ಬಿಡಿಸಲು ಹೋದ ಮಹಿಳಾ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸರ ಪ್ರಕಾರ, ಸ್ಥಳೀಯ ನಿಲ್ದಾಣವೊಂದರಲ್ಲಿ ರೈಲು ಹತ್ತಿದ ಕೆಲವು ಮಹಿಳೆಯರು ಖಾಲಿ ಇದ್ದ ಒಂದು ಸೀಟಿಗೆ ಜಗಳವಾಡಿದ್ದಾರೆ. ಯಾರೋ ಮೂರನೇ ಮಹಿಳೆ ಸೀಟಿನಲ್ಲಿ ಬಂದು ಕುಳಿತಿದ್ದಕ್ಕೆ ಈ ಗಲಾಟೆ ಶುರುವಾಗಿದೆ. ಮಾರಾಮಾರಿ ತಡೆಯಲು ಮುಂದಾದ ಮಹಿಳಾ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಘಟನೆಯ ಸಂಬಂಧ ವಾಶಿ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಶಂಭಾಜಿ ಕಟಾರೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!