ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದೀಗ ಚುನಾವಣೆ ಆಯೋಗದ ಆಯುಕ್ತರಾಗಿ ಐಎಎಸ್ ನಿವೃತ್ತ ಅಧಿಕಾರಿ ಅವರನ್ನು ನೇಮಿಸಲಾಗಿದೆ.
ಐಎಎಸ್ ನಿವೃತ್ತ ಅಧಿಕಾರಿ ಅರುಣ್ ಗೋಯಲ್ ಅವರನ್ನು ಚುನಾವಣೆ ಆಯುಕ್ತರಾಗಿ ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.
ಕಳೆದ ಮೇ ತಿಂಗಳಲ್ಲಿ ರಾಜೀವ್ ಕುಮಾರ್ ಅವರು ಮುಖ್ಯ ಚುನಾವಣೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದು, ಮೂರನೇ ಆಯುಕ್ತರ ಹುದ್ದೆ ಮಾತ್ರ ಖಾಲಿ ಇತ್ತು. ಗೋಯಲ್ ಅವರ ನೇಮಕದಿಂದ ಆಯೋಗವು ಚುನಾವಣೆಯಲ್ಲಿ ಮತ್ತಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.