Saturday, December 9, 2023

Latest Posts

ಶ್ರದ್ಧಾ ಹತ್ಯೆ ಪ್ರಕರಣ: ದೆಹಲಿಯ ರಸ್ತೆಗಳಲ್ಲಿ ಬ್ಯಾಗ್‌ ಹಿಡಿದು ಓಡಾಡುತ್ತಿದ್ದ ಅಫ್ತಾಬ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ಹತ್ಯೆ ಪ್ರಕರಣ ವಿವಿಧ ಆಯಾಮವನ್ನು ಪಡೆಯುತ್ತಿದ್ದು, ಹಂತಕ ಅಫ್ತಾಬ್‌ ಅಮೀನ್‌ ಪೂನಾವಾಲಾನು ದೆಹಲಿಯ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ.

ಈತ ಕೈಯಲ್ಲಿ ಬ್ಯಾಗ್‌ ಹಿಡಿದು ತಿರುಗಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಬ್ಯಾಗ್‌ನಲ್ಲಿ ಶ್ರದ್ಧಾಳ ದೇಹದ ತುಂಡುಗಳು ಇದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್‌ 18ರಂದು ರಸ್ತೆ ಮೇಲೆ ವ್ಯಕ್ತಿಯೊಬ್ಬ ಓಡಾಡುತ್ತಿರುವ ದೃಶ್ಯದ ವಿಡಿಯೊ ಲಭ್ಯವಾಗಿದೆ. ಇದರ ಕುರಿತು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದ ವರದಿ ಪ್ರಕಾರ, ತಿರುಗಾಡುತ್ತಿರುವುದು ಅಫ್ತಾಬ್‌ ಪೂನಾವಾಲಾನೇ ಆಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಬ್ಯಾಗಲ್ಲಿ ಏನಿತ್ತು ಎಂಬುದು ದೃಢಪಟ್ಟಿಲ್ಲ.
ಮೇ 18ರಂದು ಶ್ರದ್ಧಾ ವಾಳ್ಕರ್‌ಳನ್ನು ಹತ್ಯೆಗೈದ ಅಫ್ತಾಬ್‌, ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ದೆಹಲಿಯ ಹಲವೆಡೆ ಎಸೆದಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!