ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಒಂದು ದಿನದ ನಂತರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆತ್ಮಗೌರವವಿದ್ದರೆ ಎಎಪಿ ನಾಯಕ ಇಂತಹ ಜಾಮೀನನ್ನು ಸ್ವೀಕರಿಸಬಾರದಿತ್ತು ಎಂದು ಹೇಳಿದ್ದಾರೆ.
ಸ್ವಲ್ಪವಾದರೂ ಸ್ವಾಭಿಮಾನ ಇರುವವರು ಇಂತಹ ಜಾಮೀನು ಪಡೆದು ಜೈಲಿನಿಂದ ಹೊರಗೆ ಬರುತ್ತಿರಲಿಲ್ಲ, ನನಗೆ ಅಂತಹ ಜಾಮೀನು ಬೇಡ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಬೇಕಿತ್ತು ಆದರೆ ಕೇಜ್ರಿವಾಲ್‌ಗೆ ನಾಚಿಕೆ ಇಲ್ಲ ಎಂದು ಹೇಳಿದ್ದಾರೆ. .