ಅರವಿಂದ್ ಕೇಜ್ರಿವಾಲ್ ಮನೆಗೆ 45 ಕೋಟಿಯಲ್ಲ ಬರೋಬ್ಬರಿ 171 ಕೋಟಿ ರೂ. ಖರ್ಚು: ಕಾಂಗ್ರೆಸ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತಿಚೆಗೆ ಭಾರೀ ಸುದ್ದಿಯಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ತಮ್ಮ ಬಂಗಲೆಯ ನವೀಕರಣಕ್ಕೆ ಖರ್ಚು ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಮನೆ ನವೀಕರಣಕ್ಕೆ 45 ಕೋಟಿಯಲ್ಲ ಬರೋಬ್ಬರಿ 171 ಕೋಟಿ ರೂ. ಖರ್ಚು ಎಂದು ಕಾಂಗ್ರೆಸ್​ನ ಅಜಯ್ ಮಾಕನ್ ಹೇಳಿದ್ದಾರೆ.

ಕೇಜ್ರಿವಾಲ್ ಅವರ ಮನೆಯ ಸುತ್ತಮುತ್ತಲೂ ಅಧಿಕಾರಿಗಳು ವಾಸಿಸುವ ನಾಲ್ಕು ಬಿಲ್ಡಿಂಗ್​ಗಳಿವೆ, ನವೀಕರಣ ಪ್ರಾರಂಭವಾದಾಗಿನಿಂದ ಬಂಗಲೆಯ ವಿಸ್ತರಣೆಗಾಗಿ ಈ ಫ್ಲ್ಯಾಟ್​ಗಳನ್ನು ಖಾಲಿ ಮಾಡಲಾಗುತ್ತಿದೆ. ಈಗ ಅಧಿಕಾರಿಗಳಿಗೆ ವಸತಿ ಕಲ್ಪಿಸಲು ಸರ್ಕಾರವು ಕಾಮನ್​ವೆಲ್ತ್​ ವಿಲೇಜ್​ನಲ್ಲಿ 21ಟೈಪ್-5 ಫ್ಲಾಟ್​ಗಳನ್ನು ಖರೀದಿಸಿದೆ. ತಲಾ 6 ಕೋಟಿ ರೂ. ವೆಚ್ಚವಾಗುತ್ತದೆ ಇದು ರಾಜ್ಯದ ಬೊಕ್ಕಸದಿಂದ ಬರುತ್ತದೆ ಹಾಗೂ ಇದನ್ನು ಸಿಎಂ ಬಂಗಲೆ ವೆಚ್ಚಕ್ಕೆ ಸೇರಿಸಬೇಕು ಎಂದು ಅಜಯ್ ಹೇಳಿದರು.

ಕೇಜ್ರಿವಾಲ್ ಅವರು ಕಟ್ಟಡದ ಬೈಲಾ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ.ಇತ್ತ ಜನರು ಕೊರೋನಾದಿಂದ ಬಳಲುತ್ತಿರುವಾಗ, ಅವರಿಗೆ ಹಾಸಿಗೆಗಳು ಮತ್ತು ಆಮ್ಲಜನಕದ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಬಂಗಲೆಗೆ ಭಾರಿ ಹಣವನ್ನು ಖರ್ಚು ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!