ಸತತ 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಆರ್ಯನಾ ಸಬಲೆಂಕಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಕ್ವಿನ್ವೆನ್ ಜೆಂಗ್ ಸೋಲಿಸಿದ ಬೆಲಾರಸ್’ನ ಆರ್ನಾ ಸಬಲೆಂಕಾ ಅವರು ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಶನಿವಾರ ನಡೆದ ಆಸ್ಟ್ರೇಲಿಯನ್ ಓಪನ್  ಫೈನನಲ್ ನಲ್ಲಿ ಜೆಂಗ್ ಕ್ವಿನ್ವೆನ್ ಅವರನ್ನು ಸೋಲಿಸುವ ಮೂಲಕ ಆರ್ನಾ ಸಬಲೆಂಕಾ  ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.

1 ಗಂಟೆ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಬಲೆಂಕಾ ಜೆಂಗ್ ಅವರನ್ನು 6-3, 6-2 ನೇರ ಸೆಟ್ ಗಳಿಂದ ಸುಲಭವಾಗಿ ಸೋಲಿಸಿದರು.

ಸೆಮಿಫೈನಲ್ ನಲ್ಲಿ ಅಮೆರಿಕದ ಕೊಕೊ ಗೌಫ್ ಅವರನ್ನು ಸೋಲಿಸುವ ಮೂಲಕ, 25 ವರ್ಷದ ಸಬಲೆಂಕಾ 2016 ಮತ್ತು 2017 ರಲ್ಲಿ ಸೆರೆನಾ ವಿಲಿಯಮ್ಸ್ ನಂತರ ಆಸ್ಟ್ರೇಲಿಯನ್ ಓಪನ್ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2013ರಲ್ಲಿ ವಿಕ್ಟೋರಿಯಾ ಅಜರೆಂಕಾ ಬಳಿಕ ಮೆಲ್ಬೋರ್ನ್ ಪಾರ್ಕ್ ನಲ್ಲಿ ಮಹಿಳಾ ಪ್ರಶಸ್ತಿ ಜಯಿಸಿದ ಎರಡನೇ ಮಹಿಳೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!