Sunday, March 26, 2023

Latest Posts

ಆರ್ಯಾಪು ಗ್ರಾ. ಪಂ. | ಬಿಜೆಪಿ ಬೆಂಬಲಿತ ಜಯ

ಹೊಸದಿಗಂತ ವರದಿ ಪುತ್ತೂರು:

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ಆರ್ಯಾಪು ವಾರ್ಡ್ 4ರ ಸದಸ್ಯರೋರ್ವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ಅವರು 171 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.

ಆರ್ಯಾಪು ವಾರ್ಡ್ 4ರ ಸದಸ್ಯ ಗಿರೀಶ್ ಮರಿಕೆಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಫೆ.೨೫ ರಂದು ಮತದಾನ ಪ್ರಕ್ರಿಯೆಗಳು ನಡೆದಿತ್ತು. ಮಂಗಳವಾರ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ 498 ಮತಗಳನ್ನು ಪಡೆದು, 327 ಮತಗಳನ್ನು ಗಳಿಸಿದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೊಟ್ಲ ಅವರ ವಿರುದ್ಧ ಮತಗಳ 171 ಅಂತರದಿಂದ ಜಯ ಗಳಿಸಿದರು. 11 ಮತಗಳು ತಿರಸ್ಕೃತಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!