ನಾನು ಕಂಡಂತೆ ‘ಸಪ್ತ ಸಾಗರದಾಚೆ ಎಲ್ಲೋ‘: ಗೆಳೆಯ ಸಿನಿಮಾ ಕುರಿತು ರಿಷಬ್ ಶೆಟ್ಟಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ‘ (Sapta Sagaradache Ello) ಸಿನಿಮಾ ಇಂದು ರಿಲೀಸ್ ಆಗಿದ್ದು, ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ.

ಇತ್ತ ಸೆಲೆಬ್ರಿಟಿಗಳಿಗಾಗಿ ನಿನ್ನೆ (ಆಗಸ್ಟ್ 31) ರಂದೇ ಪ್ರೀಮಿಯರ್ ಶೋ ಅನ್ನು ಆಯೋಜಿಸಲಾಗಿತ್ತು. ಚಿತ್ರರಂಗದ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಕ್ಷಿತ್ ಶೆಟ್ಟಿಯ ಆತ್ಮೀಯ ಗೆಳೆಯ ರಿಷಬ್ ಶೆಟ್ಟಿ ಸಹ ನಿನ್ನೆಯೇ ಪತ್ನಿ ಪ್ರತಿಭಾ ಜೊತೆ ಸಿನಿಮಾ ನೋಡಿದ್ದರು.ಟ್ವಿಟ್ಟರ್​ನಲ್ಲಿ ಅಭಿಪ್ರಾಯ ಬರೆದುಕೊಂಡಿದ್ದಾರೆ.

”ಸಪ್ತ ಸಾಗರದಾಚೆ ಎಲ್ಲೋ’ ಹುಟ್ಟಿದ ಈ ಪ್ರೇಮದ ಅಲೆ ಈಗ ಭಾವಪ್ರವಾಹವಾಗಿ ಬಂದು ಮನದ ತೀರಕ್ಕೆ ಬಡಿದಿದೆ. ಹೇಮಂತ್, ಗುಂಡು ಶೆಟ್ಟಿ, ಬರವಣಿಗೆ ಅಕ್ಷರಶಃ ಕಡಲನ್ನು ಕವಿತೆಯಾಗಿಸಿದೆ. ಚರಣ್ ರಾಜ್ ಸಂಗೀತ ಅದರ ತೆರೆಗಳಷ್ಟೆ ಲಯಬದ್ಧ. ಅದೈತ್ ಅತ್ಯುತ್ತಮವಾಗಿ ದೃಶ್ಯಗಳನ್ನು ಕಟ್ಟಿ ಕೊಟ್ಟಿದ್ದಾರೆ. ರಕ್ಷಿತ್ ಹಾಗು ರುಕ್ಕಿಣಿ ಪಾತ್ರದಲ್ಲಿ ಆಳಕ್ಕಿಳಿದು ಜೀವಿಸಿದ್ದು. ಇದುವರೆಗಿನ ರಕ್ಷಿತ್ ವೃತ್ತಿ ಜೀವನದಲ್ಲೆ ದಿ ಬೆಸ್ಟ್ ಪರ್ಫಾರ್ಮೆನ್ಸ್ ಇದಾಗಿತ್ತು. ರುಕ್ಕಿಣಿ ವಸಂತ್ ಚಂದನವನದ ಆಸ್ತಿ ಆಗುವದರಲ್ಲಿ ಸಂಶಯವಿಲ್ಲ. ನಿರೀಕ್ಷೆಗಳಿಗೆ ನಿಲುಕದ ಅತೀ ಸುಂದರ ಪ್ರೇಮಕಥೆಯನ್ನು ಕನ್ನಡಕ್ಕೆ ಕೊಟ್ಟ ಚಿತ್ರತಂಡಕ್ಕೆ ಧನ್ಯವಾದಗಳು, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ನೋಡಿ ಆಶೀರ್ವಾದ ಮಾಡಿ” ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

ಜೊತೆಗೆ ”ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಪದಗಳಲ್ಲಿ ವರ್ಣಿಸಲಾಗುತ್ತಿಲ್ಲ. ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲಿ ಒಂದಾಗಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಚಿತ್ರಮಂದಿರದಲ್ಲೇ ನೋಡಿ ಮನು ಹಾಗು ಪ್ರಿಯಾರ ಜಗತ್ತಲ್ಲಿ ಭಾಗಿಯಾಗಿ” ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!