ನಟ ಗಣೇಶ್ ಗೆ ರಿಲೀಫ್: ಕಟ್ಟಡ ಕಾಮಗಾರಿ ನಡೆಸೋದಕ್ಕೆ ಅನುಮತಿಕೊಟ್ಟ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಟ ಗಣೇಶ್ ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ಕೊಟ್ಟಿದ್ದು, ಕಟ್ಟಡ ಕಾಮಗಾರಿ ನಡೆಸೋದಕ್ಕೆ ಮಧ್ಯಂತರ ಅನುಮತಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನಟ ಗಣೇಶ್ ಪರ ವಾದಿಸಿದ ಹಿರಿಯ ವಕೀಲ ಶ್ರೀಧರ್ ಪ್ರಭು ಅವರು, ತಾತ್ಕಾಲಿಕ ಕಟ್ಟಡ ಕಾಮಗಾರಿ ಮುಂದುವರೆಸೋದಕ್ಕೆ ಹೈಕೋರ್ಟ್ ಮಧ್ಯಂತರ ಅನುಮತಿಯನ್ನು ನೀಡಿದೆ. ಅಲ್ಲದೇ ಶಾಶ್ವತ ಕಟ್ಟಡ ಕಾಮಗಾರಿ ನಡೆಸದಂತೆ ಸೂಚಿಸಿದೆ. ಹೈಕೋರ್ಟ್ ಆದೇಶಕ್ಕೆ ಬದ್ಧವಾಗಿರುವಂತೆಯೂ ಆದೇಶದಲ್ಲಿ ತಿಳಿಸಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್ ನ ನ್ಯಾಯಮೂರ್ತಿ ಕೃಷ್ಣಾ ಎಸ್ ದೀಕ್ಷಿತ್ ಅವರನ್ನೊಳಗೊಂಡಂತ ನ್ಯಾಯಪೀಠವು, ಶಾಶ್ವತ ಕಟ್ಟಡ ನಿರ್ಮಿಸದರೇ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೇ ತಾತ್ಕಾಲಿಕ ಕಟ್ಟಡ ಕಾಮಗಾರಿಯನ್ನು ನಡೆಸೋದಕ್ಕೆ ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿ ಗ್ರಾಮದ ಸರ್ವೇ ನಂಬರ್ 105ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ 1 ಎಕರೆ 24 ಗುಂಟೆ ಜಮೀನು ಹೊಂದಿದ್ದರು. ಇಲ್ಲಿ ತೋಟಗಾರಿಕೆ ಉದ್ದೇಶದಿಂದ ತಾತ್ಕಾಲಿಕವಾಗಿ ಮನೆ ನಿರ್ಮಾಣ ಮಾಡೋದಕ್ಕೆ ಬಂಡೀಪುರ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯಿಂದ ಅನುಮತಿ ನೀಡಲಾಗಿತ್ತು. ಆದ್ರೇ ಅವರು ಸೂಕ್ಷ್ಮ ವಲಯದಲ್ಲೇ ಬೃಹತ್ ಕಟ್ಟ ನಿರ್ಮಿಸಲು ಸಿದ್ಧತೆ ಕೈಗೊಂಡಿದ್ದರು.

ಬಳಿಕ ನೋಟಿಸ್ ಬಂದ ಹಿನ್ನೆಲೆ ನಟ ಗಣೇಶ್ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಅಲ್ಲದೇ ಈ ನೋಟಿಸ್ ಪ್ರಶ್ನಿಸಿ ಸ್ಯಾಂಡಲ್ ಪುಡ್ ನಟ ಗಣೇಶ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ಇದೀಗ ತಾತ್ಕಾಲಿಕ ಕಟ್ಟಡ ಕಾಮಾಗಿರಿ ನಿರ್ಮಾಣಕ್ಕೆ ಮಧ್ಯಂತರ ಅನುಮತಿ ನೀಡಿ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!