STORY | ಒಂದಿನ ಎಲ್ಲ ‘ಭಾವನೆಗಳು’ ಟ್ರಿಪ್ ಹೋಗಿದ್ವಂತೆ…

ಒಂದಿನ ಎಲ್ಲ ಭಾವನೆಗಳು ಐಲ್ಯಾಂಡ್‌ಗೆ ಟ್ರಿಪ್ ಹೋಗಿದ್ವಂತೆ. ಕೋಪ, ಅಳು, ನಗು, ಪ್ರೀತಿ, ಅಹಂಕಾರ, ಬೇಸರ ಹೀಗೆ ಎಲ್ಲರೂ ತುಂಬಾ ಟೈಮ್ ಆಯ್ತು ಒಂದು ಟ್ರಿಪ್ ಮಾಡ್ಬಿಡೋಣ ಅಂತ ಹೋಗಿದ್ವಂತೆ.

ಐಲ್ಯಾಂಡ್ ಸಖತ್ ಆಗಿ ಇತ್ತು, ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ವು ಎಲ್ಲ ಭಾವನೆಗಳು, ಹಾಗೇ ಪೀಸ್‌ಫುಲ್ ಆಗಿ ಸ್ವಿಮ್ ಮಾಡ್ಕೊಂಡು ಎಂಜಾಯ್ ಮಾಡ್ತಿದ್ದ ಭಾವನೆಗಳಿಗೆ ಯಾಕೋ ಅಲೆಗಳ ಹೊಡೆದ ಜಾಸ್ತಿ ಆಗ್ತಿದೆ ಅಂತ ಅನಿಸೋಕೆ ಶುರುವಾಯ್ತು.

ಹೌದು, ತಲೆ ಎತ್ತಿ ನೋಡಿದ್ರೆ ಸಿಕ್ಕಾಪಟ್ಟೆ ದೊಡ್ಡ ಅಲೆಗಳು ಕಾಣಿಸ್ತಾ ಇವೆ, ಏನು ಮಾಡೋದು ಗೊತ್ತಾಗ್ತಾ ಇಲ್ಲ, ಹೇಗೋ ಪ್ರೀತಿ ಒಂದು ದೋಣಿಯನ್ನು ಹುಡುಕಿ ತಂತಂತೆ. ದೋಣಿಯಲ್ಲಿ ಎಲ್ಲ ಭಾವನೆಗಳು ಹತ್ತಿ ಕುಳಿತುಬಿಟ್ಟಿದೆ. ಒಂದು ಭಾವನೆ ಮಾತ್ರ ದೋಣಿ ಹತ್ತುತ್ತಾ ಇಲ್ಲ, ಯಾವುದು ಹೇಳಿ?

ನಿಮ್ಮ ಗೆಸ್ ಸರಿಯಾಗಿಯೇ ಇದೆ, ಅಹಂಕಾರ, ಈಗೋ ಅಂತ ಹೇಳ್ತೀವಲ್ಲ, ಆ ಭಾವನೆ ನಾನು ದೋಣಿ ಹತ್ತೋದಿಲ್ಲ ಅಂತ ಕುಳಿತಿತ್ತಂತೆ. ಪ್ರೀತಿ, ಸ್ನೇಹ, ಅಳು, ನಗು, ಕೋಪ ಎಲ್ಲ ಭಾವನೆಗಳು ಅದನ್ನು ಕನ್ವಿನ್ಸ್ ಮಾಡೋಕೆ ಟ್ರೈ ಮಾಡಿವೆ. ಆದ್ರೆ ಅಹಂಕಾರ ಮಾತ್ರ ಬರೋಕೆ ರೆಡಿ ಆಗ್ಲೇ ಇಲ್ಲ. ಎಲ್ಲಾ ಭಾವನೆಗಳು ಈಗೋ ಬೇಡ್ವೇ ಬೇಡ ನಾವು ಹೋಗೋಣ ಬಾ ಅಂತ ಪ್ರೀತಿಯನ್ನು ಕೂಗಿವೆ. ಆದ್ರೆ ಪ್ರೀತಿ ಪ್ರೀತೀನೇ ಅಲ್ವಾ? ನಾನು ಬರೋದಿಲ್ಲ ಅಂತ ಈಗೋ ಜೊತೆಗೆ ಉಳಿದುಕೊಂಡುಬಿಡ್ತು. ಉಳಿದೆಲ್ಲ ಭಾವನೆಗಳು ಸುರಕ್ಷಿತವಾಗಿ ದಡ ಸೇರಿದ್ವು. ಅಹಂಕಾರದ ಕೈ ಹಿಡಿದ ಪ್ರೀತಿ ಅಲ್ಲೇ ಸತ್ತು ಹೋಯ್ತು!

ಈಗೋ ಇದ್ದಲ್ಲಿ ಪ್ರೀತಿ ಇರೋದಕ್ಕೆ ಸಾಧ್ಯ ಇದೆ, ಆದರೆ ಬದುಕೋಕೆ ಸಾಧ್ಯ ಇಲ್ಲ. ಅಹಂಕಾರ ಬಿಟ್ಟು ಪ್ರೀತಿಸಿ, ಸೆಲ್ಫ್ ಕೇರ್ ಬೇರೆ, ಈಗೋ ಬೇರೆ. ಸಣ್ಣ ಈಗೋಗೆ ಸಿಲುಕಿ ವಿಶಾಲ ಹೃದಯದ ಪ್ರೀತಿಯನ್ನು ಕಳೆದುಕೊಳ್ಳಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!