ದಿನಭವಿಷ್ಯ : ಕಣ್ಣುಮುಚ್ಚಿ ಪ್ರಾಮಿಸ್ ಮಾಡೋ ಸಮಯ ಇದಲ್ಲ, ಸಮಸ್ಯೆಯಾದೀತು!

ಮೇಷ
ಕೇವಲ ವೃತ್ತಿಯ ಕಾರ್ಯಕ್ಕಷ್ಟೇ ಗಮನ ಕೊಡುತ್ತಿದ್ದೀರಿ. ಉಳಿದ  ವಿಷಯಗಳತ್ತಲೂ ಗಮನ ಹರಿಸಲು ಮರೆಯದಿರಿ. ಒತ್ತಡ ನಿವಾರಿಸಿಕೊಳ್ಳಿ.

ವೃಷಭ
ನಿಮ್ಮ ಖಾಸಗಿ ವ್ಯವಹಾರದಲ್ಲಿ ಏರುಪೇರು ಸಂಭವ.  ಅದನ್ನು ನಿಭಾಯಿಸಲು ಸನ್ನದ್ಧರಾಗಿರಿ. ವಿಚಲಿತರಾಗುವುದು ಬೇಡ.

ಮಿಥುನ
ನಿಮಗೆ ಬೇಕಾದುದೇನು ಎಂಬುದನ್ನು ಅಂತರಾತ್ಮದ ಜತೆ ಕೇಳಿರಿ. ಇಷ್ಟವಿಲ್ಲದ ಕೆಲಸ ಮಾಡುತ್ತಾ ಕೊರಗಬೇಡಿ. ಇಷ್ಟಪಡುವ ವಿಷಯ ಆಯ್ದುಕೊಳ್ಳಿ.

ಕಟಕ
ಕಣ್ಣುಮುಚ್ಚಿ ಯಾರಿಗೂ ವಾಗ್ದಾನ ಕೊಡಬೇಡಿ. ಅದರ ಈಡೇರಿಕೆ ಕಷ್ಟವಾದೀತು. ಮನಸ್ಸಿಗೆ ಒಗ್ಗದ ಕೆಲಸ ಮಾಡಲು ಹೋಗಬೇಡಿ. ಆಪ್ತರ ನೆರವು ಪಡೆಯಿರಿ.

ಸಿಂಹ
ಇತರರ ಜತೆ ಅನವಶ್ಯ ವಾಗ್ವಾದದಲ್ಲಿ ತೊಡಗಬೇಡಿ. ಅದರಿಂದ ಏನೂ ಸಾಧಿಸಲ್ಪಡದು. ಕೇವಲ ಮನಶ್ಯಾಂತಿ ಹಾಳು ಅಷ್ಟೆ.

ಕನ್ಯಾ
ಇತರರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಅದು ನಿಮಗೆ ಸಂತೋಷ ನೀಡಲಿದೆ. ಕೌಟುಂಬಿಕ ಸಮಾರಂಭ ಏರ್ಪಡುವ ಸಂಭವ. ಆತ್ಮೀಯರ ಒಡನಾಟ.

ತುಲಾ
ಹೆಚ್ಚುವರಿ ಹೊಣೆಗಾರಿಕೆ. ನಿಮಗೆ ಸಾಧ್ಯವಾಗುವ ಕಾರ್ಯ ಮಾತ್ರ ಒಪ್ಪಿಕೊಳ್ಳಿ. ಇಲ್ಲವಾದರೆ  ಸಂಕಷ್ಟಕ್ಕೆ ಸಿಕ್ಕುವಿರಿ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ.

ವೃಶ್ಚಿಕ
ಹತ್ತಿರದವರು ನಿಮ್ಮ ಭಾವನೆಗೆ ಸ್ಪಂದಿಸುತ್ತಿಲ್ಲ ಎಂಬ ಕೊರಗು. ನೀವು ಕಡೆಗಣಿಸಲ್ಪಡುತ್ತಿದ್ದೀರಿ ಎಂಬ ಅನಿಸಿಕೆ. ಇವೆಲ್ಲ ನಿರಾಧಾರಿತ. ನೀವೇ ಬೆರೆಯಲು ಯತ್ನಿಸಿ.

ಧನು
ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಖರ್ಚಿನ ಮೇಲೆ ನಿಯಂತ್ರಣ ಇಡಿ. ಬಂಧುಗಳಿಂದ ಸಹಕಾರ, ಒತ್ತಡ ನಿವಾರಣೆ.

ಮಕರ
ನಿಮ್ಮ ಪ್ರಸಿದ್ಧಿ, ಗೌರವ ಹೆಚ್ಚುವ ಬೆಳವಣಿಗೆ. ನಿಮ್ಮ ಮೇಲೆ ಪ್ರಭಾವ ಬೀರುವ ವ್ಯಕ್ತಿಯ ಭೇಟಿ ಸಂಭವ. ವಿವಾದದಲ್ಲಿ ಸಿಲುಕದಂತೆ ಎಚ್ಚರ ವಹಿಸಿರಿ.

ಕುಂಭ
ಮಹತ್ವದ ಕಾರ್ಯ ಅಥವಾ ಭೇಟಿ ಇದ್ದರೆ ಅದನ್ನು ಮುಂದಕ್ಕೆ ಹಾಕುವುದು ಒಳಿತು. ನೀವು ಬಯಸಿದಂತೆ ಸಾಗಲಾರದು. ನಿರಾಶೆ ಉಂಟಾದೀತು.

ಮೀನ
ಕೈಗೊಂಡ ಕಾರ್ಯ ಬೇಗನೆ ಮುಗಿಸಿ.  ಇನ್ನಷ್ಟು ವಿಳಂಬ ಮಾಡಬೇಡಿ. ಆರೋಗ್ಯ ಪರಿಸ್ಥಿತಿಯಲ್ಲಿ ಸುಧಾರಣೆ. ಆತಂಕ ನಿವಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!