September 5, 2026
Saturday, September 5, 2026
spot_img

ಇಂಥ ಜನ ಇರೋವರೆಗೂ ನಮ್ಮ ದೇಶ ಉದ್ಧಾರ ಆಗೋಕೆ ಸಾಧ್ಯನೇ ಇಲ್ಲ! ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿ ನೀರು ಬಾರದೇ ಇದ್ದ ಸಂದರ್ಭದಿಂದ ಹಿಡಿದು ಪಿಂಚಣಿ ಬಾರದೇ ಹೋದರು ನಾವು ಸರ್ಕಾರಕ್ಕೆ ಹಿಡಿಹಿಡಿ ಶಾಪವನ್ನು ಹಾಕುತ್ತೇವೆ. ಮೆಟ್ರೋ ರಶ್‌ ಆಗೋದಕ್ಕೂ, ಎಲ್ಲ ಕಡೆ ಕ್ಯೂ ನಿಲ್ಲೋದಕ್ಕೂ ಸರ್ಕಾರವನ್ನೇ ದೂಷಿಸುತ್ತೇವೆ. ಆದರೆ ದೇಶದ ಹೆಸರು ಉಳಿಸಲು ಬೇಕಾಗಿರುವ ಪ್ರಮುಖವಾದ ಅಂಶವೆಂದರೆ ಸಿವಿಕ್‌ ಸೆನ್ಸ್‌! ಹೌದು, ಇದು ದೇಶದ ಬಹುದೊಡ್ಡ ಸಮಸ್ಯೆ. ನಮ್ಮ ಜನರಲ್ಲಿ ದಿನೇ ದಿನೇ ಕಾಮನ್‌ ಸೆನ್ಸ್‌ ಹಾಗೂ ಸಿವಿಕ್‌ ಸೆನ್ಸ್‌ ಕಡಿಮೆಯಾಗುತ್ತಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ವಿಡಿಯೋದಲ್ಲಿ ಮೆಟ್ರೋ ಸ್ಟೇಷನ್‌ ಒಂದು ಕಾಣಿಸುತ್ತಿದೆ. ಸಾಮಾನ್ಯವಾಗಿ ಮೆಟ್ರೋ ಸ್ಟೇಷನ್‌ ಎಂಟ್ರಿ ಆದ ನಂತರ ಪ್ರಯಾಣಿಸುವ ಜಾಗಕ್ಕೆ ಟಿಕೆಟ್‌ ಪಡೆಯಬೇಕು. ತದನಂತರ ಟಿಕೆಟ್‌ ಪರಿಶೀಲನೆ ಮಾಡಿಸಲು ಇರುವ ಬ್ಯಾರಿಕೇಡ್‌ಗೆ ನಮ್ಮ ಟಿಕೆಟ್‌ ಇಟ್ಟು ಬಾಗಿಲು ತೆಗೆಯುವವರೆಗೂ ಕಾಯಬೇಕು. ಬಾಗಿಲು ತೆಗೆದ ನಂತರ ಹೋಗಬೇಕು. ಇದು ರೂಲ್ಸ್‌. ಆದರೆ ಪುಣೆಯ ಮೆಟ್ರೋ ಸ್ಟೇಷನ್‌ ಒಂದರಲ್ಲಿ ಮೂವರು ಮಹಿಳೆಯರು ಟಿಕೆಟ್‌ ಇಲ್ಲದೆ ಮಶೀನ್‌ ಕೆಳಗಡೆ ಬಗ್ಗಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

ಸಿವಿಕ್‌ ಸೆನ್ಸ್‌ ಇಲ್ವೇ ಇಲ್ಲ

ಜಗತ್ತಿನಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ನೀರು ಕಲುಷಿತಗೊಳ್ಳುತ್ತಿರುವುದು, ಗಾಳಿಯ ಕ್ವಾಲಿಟಿ ಹಾಳಾಗುತ್ತಿರುವುದು, ನೀರಿನಲ್ಲಿ ಪ್ಲಾಸ್ಟಿಕ್‌ ಸಿಗುತ್ತಿರುವುದು, ರಸ್ತೆಗಳು ಗಬ್ಬುನಾರುತ್ತಿರುವುದು, ಎಲ್ಲಿ ಬೇಕಲ್ಲಿ ಕಸ ಇರುವುದು ಕಿರಿಕಿರಿ ಉಂಟುಮಾಡುತ್ತದೆ. ಇದೆಲ್ಲವೂ ಸರಿಯಾಗಬೇಕಾದರೆ ಜನರಲ್ಲಿ ಸಿವಿಕ್‌ ಸೆನ್ಸ್‌ ಬರಬೇಕು. ಸಿವಿಕ್‌ ಸೆನ್ಸ್‌ ಇಲ್ಲದವರಂತೆ ಹೀಗೆ ನುಗ್ಗಿ ಹೋಗೋದು ಸರಿಯಲ್ಲ.

ಕಮೆಂಟ್‌ಗಳಲ್ಲಿ ಜನ ಹೇಳೋದೇನು?

ಬೆಂಗಳೂರಿನ ಮೆಟ್ರೋ ಸ್ಟೇಷನ್‌ಗಳ ಪ್ರತೀ ಹೆಜ್ಜೆ ಹೆಜ್ಜೆಗೂ ಸೆಕ್ಯೂರಿಟಿ ಆಫೀಸರ್‌ಗಳು ಕಾಣಿಸುತ್ತಾರೆ. ಟಿಕೆಟ್‌ ತೆಗೆದುಕೊಳ್ಳುವ ಜಾಗದಿಂದ ಮೆಟ್ರೋ ಹತ್ತುವರೆಗೂ ಅವರ ಮೇಲ್ವಿಚಾರಣೆ ಇದ್ದೇ ಇರುತ್ತದೆ. ಆದರೆ ಈ ವ್ಯವಸ್ಥೆ ಎಲ್ಲಾ ಕಡೆ ಇದ್ದಂತೆ ಕಾಣಿಸುತ್ತಿಲ್ಲ. ನಮ್ಮ ಬೆಂಗಳೂರಿನ ಮೆಟ್ರೋಗಳಲ್ಲಿ ಯಾರೇ ಹೀಗೆ ಮಾಡಿದ್ದರೂ ಸೆಕ್ಯುರಿಟಿ ಬಿಡುತ್ತಿರಲಿಲ್ಲ, ಸೆಕ್ಯುರಿಟಿ ಬಿಡಿ ಜನರೇ ಬಿಡುತ್ತಿರಲಿಲ್ಲ. ಅವರನ್ನು ಹಿಡಿದು ಫೈನ್‌ ಹಾಕಿಸುತ್ತಿದ್ದರು. ಸೆಕ್ಯುರಿಟಿಗಳೇ ಇಲ್ಲದ ಮೆಟ್ರೋ, ಒಬ್ಬರನ್ನು ನೋಡಿ ಎಲ್ಲರೂ ಮಾಡೋಕೆ ಕಲೀತಾರೆ, ಈ ರೀತಿ ಮಾಡಿದ್ರೆ ನಮ್ಮ ದೇಶ ಉದ್ಧಾರ ಆಗೋಕೆ ಸಾಧ್ಯವೇ ಇಲ್ಲ. ಇಂಥವರನ್ನು ಹಿಡಿದು ಬುದ್ಧಿ ಕಲಿಸಬೇಕು ಎಂದು ಕಮೆಂಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !