Tuesday, February 7, 2023

Latest Posts

ನಿರ್ಮಲೇಂದು ದತ್ತಾ ಕ್ರಾಂತಿಕಾರಿ ಚಟುವಟಿಕೆಗಳು ಹೆಚ್ಚುತ್ತಿದ್ದಂತೆ ಕಠಿಣ ಶಿಕ್ಷೆ ವಿಧಿಸಿತ್ತು ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
1924 ರಲ್ಲಿ ಅಸ್ಸಾಂ ನ ಸೈಲ್ಹೆಟ್‌ ಪ್ರದೇಶದಲ್ಲಿ ಜನಿಸಿದ ನಿರ್ಮಲೇಂದು ದತ್ತಾ ಅವರು ನಾಗೇಂದ್ರನಾಥ್ ಅವರ ಪುತ್ರ. ಮೆಟ್ರಿಕ್ಯುಲೇಷನ್‌ ಪಾಸು ಮಾಡಿದ್ದ ದತ್ತಾ ಡಾಕಾದ ಚಿತ್ರಾಂಜನ್ ಕಾಟನ್ ಮಿಲ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. ಆ ಸಂದರ್ಭದಲ್ಲಿ ಬಂಗಾಳ ಸ್ವಯಂಸೇವಕ ಗುಂಪಿನ ಸದಸ್ಯರಾದ ಅವರಿಗೆ ಆ ವೇಳೆ ದೇಶದಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗಳು ಗಮನಕ್ಕೆ ಬಂದವು. 1940 ರಲ್ಲಿ ಅವರು ಬಂಗಾಳ ಸ್ವಯಂಸೇವಕ ಗುಂಪಿನ ಸಕ್ರಿಯ ಸದಸ್ಯರಾದರು. ಅವರು ಪಕ್ಷದ ಪರವಾಗಿ ಚಂದಾವನ್ನು ಸಂಗ್ರಹಿಸಿದರು ಮತ್ತು ಪಕ್ಷದ ಕೆಲಸಕ್ಕಾಗಿ ಸೂಚನೆಗಳನ್ನು ಸ್ವೀಕರಿಸಲು ಪ್ರಮುಖ ನಾಯಕರೊಂದಿಗೆ ಸಂಬಂಧ ಹೊಂದಿದ್ದರು. ಅವರು ಸಂಘವು ಹೊರಡಿಸುತ್ತಿದ್ದ ಹಸ್ತಪ್ರತಿ  ಪತ್ರಿಕೆಯ ಪ್ರಕಟಣೆಯ ಉಸ್ತುವಾರಿ ವಹಿಸಿದ್ದರು. ಡಾಕಾ ವಿಶ್ವವಿದ್ಯಾಲಯದ ಪ್ರಯೋಗಾಲಯದಿಂದ ಕ್ರಾಂತಿಕಾರಿಗಳಿಗೆ ಬೇಕಾಗಿದ್ದ ರಾಸಾಯನಿಕ ವಸ್ತುಗಳ ಕಳ್ಳತನವನ್ನು ದಾಸ್‌ ಅವರು ಆಯೋಜಿಸಿದ್ದರು. ಅವರು “ಫ್ರೀ ಇಂಡಿಯಾ ಲೀಗ್ ಬುಲೆಟಿನ್” ಅನ್ನು ವಿತರಿಸಿದರು, ಇದು ಬಿಟೀಷರ ವಿರೋಧಿ ಹಾಗೂ ಜಪಾನೀಸ್ ಪರವಾದ ಪ್ರಕಟಣೆಯಾಗಿತ್ತು. ಈ ವೇಳೆ ಬ್ರಿಟೀಷರಿಂದ ಬಂಧನಕ್ಕೊಳಗಾದ‌ ದಾಸ್ ಜೈಲಿನಲ್ಲಿದ್ದಕೊಂಡೇ ಪಕ್ಷದ ಸದಸ್ಯರಿಗೆ ಕದ್ದು ಸೂಚನೆಗಳನ್ನು ರವಾನಿಸುತ್ತಿದ್ದರು. ಬಂಗಾಳದ ಸ್ವಾತಂತ್ರ್ಯ ಚಳುವಳಿಯಲ್ಲಿ ದಾಸ್‌ ಪ್ರಭಾವ ಹೆಚ್ಚುತ್ತಿರುವುದನ್ನು ಗಮನಿಸಿದ ಬ್ರಿಟೀಷ್‌ ಸರ್ಕಾರ 11 ಸೆಪ್ಟೆಂಬರ್ 1944 ರಂದು ಅವರನ್ನು ಭದ್ರತಾ ಖೈದಿಯನ್ನಾಗಿ ಘೋಷಿಸಿ ಕಠಿಣ ಶಿಕ್ಷೆ ವಿಧಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!