ದಿನಭವಿಷ್ಯ | ಸೋಮವಾರದ ರಾಶಿಫಲಗಳು ಹೀಗಿವೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಹದಗೆಟ್ಟ ಸಂಬಂಧ ಸರಿಮಾಡಲು ಗಮನ ಕೊಡಿ. ನಿಮ್ಮ ಕಠಿಣ ನಿಲುವು ಸಡಿಲಿಸಿ. ವೃತ್ತಿಯ  ಒತ್ತಡವು ಮನಸ್ಸಿನ ಶಾಂತಿ ಕದಡಬಹುದು.

ವೃಷಭ
ಹುದುಗಿಟ್ಟ ಒತ್ತಡವು ಒಮ್ಮೆಗೆ ಸ್ಫೋಟಗೊಳ್ಳುವ ಪ್ರಸಂಗ ಉದ್ಭವಿಸ ಬಹುದು. ಅದು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ.ಕೌಟುಂಬಿಕ ಅಸಹಕಾರ.

ಮಿಥುನ
ನಿಮ್ಮ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತ ಪಡಿಸಲು ಹಿಂಜರಿಕೆ ಬೇಡ. ಆರ್ಥಿಕ ಸ್ಥಿತಿ ಉತ್ತಮಪಡಿಸುವ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ.

ಕಟಕ
ಯಾವುದೇ ಅನಿರೀಕ್ಷಿತ ಬೆಳವಣಿಗೆ ಸಂಭವಿಸಿದರೂ ಅದಕ್ಕೆ ತಕ್ಷಣವೇ ಹೊಂದಿಕೊಳ್ಳಿ. ಅದುವೇ ನಿಮಗೆ ಒಳಿತು ತರುವುದು. ಕೌಟುಂಬಿಕ ಸಹಕಾರ.

ಸಿಂಹ
ಮಾನಸಿಕ ಸಂಘರ್ಷವು ನಿಮ್ಮಲ್ಲಿ ಅಸಹನೆ ಉಂಟು ಮಾಡುವುದು. ಕೌಟುಂಬಿಕ ಉದ್ವಿಗ್ನತೆಯು ಇತರರ ಮಧ್ಯಸ್ಥಿಕೆಯಿಂದ ತಹಬಂದಿಗೆ ಬರುವುದು.

ಕನ್ಯಾ
ಬಹುಕಾಲದಿಂದ ಬಾಕಿ ಇರುವ ಕೆಲಸವು ಪೂರ್ಣಗೊಳ್ಳಲಿದೆ. ನಿಮ್ಮ ಪ್ರತೀ ಕಾರ್ಯಕ್ಕೆ ಕುಟುಂಬದ ಬೆಂಬಲ ದೊರಕುವುದು. ಆರ್ಥಿಕ ಪ್ರಗತಿ.

ತುಲಾ
ಆಪ್ತ ವ್ಯಕ್ತಿಗಳ ಜತೆ ಹೆಚ್ಚು ಕಾಲ ಕಳೆಯುವಿರಿ. ಆರೋಗ್ಯಕರ ಆಹಾರಕ್ಕೆ ಮಾತ್ರ ಆದ್ಯತೆ ಕೊಡಿ. ಇಲ್ಲವಾದರೆ ಸಮಸ್ಯೆಗೆ ಸಿಕ್ಕುವಿರಿ. ಹೂಡಿಕೆಯಿಂದ ಲಾಭ.

ವೃಶ್ಚಿಕ
ಬಾಕಿ ಇರುವ ಕಾರ್ಯ ಪೂರೈಸಿರಿ. ಆರ್ಥಿಕ ಪರಿಸ್ಥಿತಿಯು ತೃಪ್ತಿಕರ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಕಠಿಣ ಕಾರ್ಯಕ್ಕೆ ಇತರರ ಸಹಕಾರ ಪಡೆಯುವಿರಿ.

ಧನು
ವೃತ್ತಿಯಲ್ಲಿ ಉತ್ತಮ ಫಲ ಪಡೆಯಲು ದೀರ್ಘಾವಧಿ ಯೋಜನೆ ರೂಪಿಸಿ. ಪ್ರೀತಿಯ ವಿಷಯದಲ್ಲಿ  ಗುಣಾತ್ಮಕ ಬೆಳವಣಿಗೆ. ಆರ್ಥಿಕ  ಸದೃಢ.

ಮಕರ
ಪ್ರೀತಿಪಾತ್ರರ ಜತೆ ವಾದಕ್ಕೆ ಹೋಗದಿರಿ. ಅವರನ್ನು ಸಮಾಧಾನ ಮಾಡುವುದು ಕಷ್ಟವಾಗಲಿದೆ. ಬಾಕಿ ಇರುವ ಕೆಲಸ ಮುಗಿಸಲು ಆದ್ಯತೆ ಕೊಡಿ.

ಕುಂಭ
ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ಕೆ ಕೈಹಚ್ಚಿದರೆ ಯಶಸ್ಸು ಸಿಗಲಿದೆ. ಇತರರ ಸಲಹೆ ನಿಮಗೆ ಉಪಕಾರಿಯಾಗಲಿದೆ. ಕೌಟುಂಬಿಕ ಶಾಂತಿ

ಮೀನ
ನಿಮ್ಮ ಕೆಲಸವನ್ನು ಹಾಳು ಮಾಡಲು ಕೆಲವರು ಯತ್ನಿಸುವರು. ಆ ಕುರಿತಂತೆ ಎಚ್ಚರಿಕೆ ಇರಲಿ. ಕುಟುಂಬಸ್ಥರ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!